Ash-Shams

الشمس

The Sun15 ayahsMeccan

بِسْمِ ٱللَّهِ ٱلرَّحْمَٰنِ ٱلرَّحِيمِ

وَٱلشَّمۡسِ وَضُحَىٰهَا﴿١

1ಸೂರ್ಯ ಮತ್ತು ಅದರ ಬೆಳಕಿನ ಮೇಲಾಣೆ!

وَٱلۡقَمَرِ إِذَا تَلَىٰهَا﴿٢

2ಚಂದ್ರನ ಮೇಲಾಣೆ! ಅದು ಸೂರ್ಯನನ್ನು ಹಿಂಬಾಲಿಸುವಾಗ.

وَٱلنَّهَارِ إِذَا جَلَّىٰهَا﴿٣

3ಹಗಲಿನ ಮೇಲಾಣೆ! ಅದು ಸೂರ್ಯನನ್ನು ಬೆಳಗಿಸುವಾಗ.

وَٱلَّيۡلِ إِذَا يَغۡشَىٰهَا﴿٤

4ರಾತ್ರಿಯ ಮೇಲಾಣೆ! ಅದು ಸೂರ್ಯನನ್ನು ಮುಚ್ಚುವಾಗ.

وَٱلسَّمَآءِ وَمَا بَنَىٰهَا﴿٥

5ಆಕಾಶ ಮತ್ತು ಅದನ್ನು ನಿರ್ಮಿಸಿದವನ ಮೇಲಾಣೆ!

وَٱلۡأَرۡضِ وَمَا طَحَىٰهَا﴿٦

6ಭೂಮಿ ಮತ್ತು ಅದನ್ನು ವಿಸ್ತರಿಸಿದವನ ಮೇಲಾಣೆ!

وَنَفۡسٖ وَمَا سَوَّىٰهَا﴿٧

7ಆತ್ಮ ಮತ್ತು ಅದನ್ನು ಸರಿಪಡಿಸಿದವನ ಮೇಲಾಣೆ!

فَأَلۡهَمَهَا فُجُورَهَا وَتَقۡوَىٰهَا﴿٨

8ನಂತರ ಅವನು ಅದಕ್ಕೆ ದುಷ್ಕರ್ಮದ ಬಗ್ಗೆ ಮತ್ತು ರಕ್ಷಾಮಾರ್ಗದ ಬಗ್ಗೆ ತಿಳಿಸಿದನು.[1]

قَدۡ أَفۡلَحَ مَن زَكَّىٰهَا﴿٩

9ಅದನ್ನು ಪರಿಶುದ್ಧಗೊಳಿಸಿದವನು ಯಶಸ್ವಿಯಾದನು.

وَقَدۡ خَابَ مَن دَسَّىٰهَا﴿١٠

10ಅದನ್ನು ಮಲಿನಗೊಳಿಸಿದವನು ವಿಫಲನಾದನು.

كَذَّبَتۡ ثَمُودُ بِطَغۡوَىٰهَآ﴿١١

11ಸಮೂದ್ ಗೋತ್ರದವರು ತಮ್ಮ ಅತಿರೇಕದಿಂದಾಗಿ (ಸತ್ಯವನ್ನು) ನಿಷೇಧಿಸಿದರು.

إِذِ ٱنۢبَعَثَ أَشۡقَىٰهَا﴿١٢

12ಅವರಲ್ಲಿನ ಅತ್ಯಂತ ನತದೃಷ್ಟನು ಎದ್ದು ನಿಂತ ಸಂದರ್ಭ.

فَقَالَ لَهُمۡ رَسُولُ ٱللَّهِ نَاقَةَ ٱللَّهِ وَسُقۡيَٰهَا﴿١٣

13ಆಗ ಅಲ್ಲಾಹನ ಸಂದೇಶವಾಹಕರು (ಸ್ವಾಲಿಹ್) ಅವರೊಡನೆ ಹೇಳಿದರು: “ಅಲ್ಲಾಹನ ಒಂಟೆ ಮತ್ತು ಅದರ ಜಲಪಾನದ ಬಗ್ಗೆ (ಎಚ್ಚರವಹಿಸಿರಿ).”

فَكَذَّبُوهُ فَعَقَرُوهَا فَدَمۡدَمَ عَلَيۡهِمۡ رَبُّهُم بِذَنۢبِهِمۡ فَسَوَّىٰهَا﴿١٤

14ಆದರೆ ಅವರು ಆ ಸಂದೇಶವಾಹಕರನ್ನು ನಿಷೇಧಿಸಿದರು ಮತ್ತು ಒಂಟೆಯ ಕಾಲುಗಳನ್ನು ಕಡಿದರು. ಆಗ ಅವರ ಪಾಪಗಳ ಕಾರಣದಿಂದ ಅವರ ಪರಿಪಾಲಕನು (ಅಲ್ಲಾಹು) ಅವರ ಮೇಲೆ ವಿನಾಶವನ್ನು ತಂದನು. ಅವನು ಅದನ್ನು (ಅವರೆಲ್ಲರಿಗೂ) ಸಮಾನಗೊಳಿಸಿದನು.

وَلَا يَخَافُ عُقۡبَٰهَا﴿١٥

15ಅದರ ಅನಂತರ ಫಲದ ಬಗ್ಗೆ ಅವನು ಭಯಪಡುವುದಿಲ್ಲ.

RELATED SURAHS