Al-Balad

البلد

The City20 ayahsMeccan

بِسْمِ ٱللَّهِ ٱلرَّحْمَٰنِ ٱلرَّحِيمِ

لَآ أُقۡسِمُ بِهَٰذَا ٱلۡبَلَدِ﴿١

1ನಾನು ಈ ನಗರದ (ಮಕ್ಕಾದ) ಮೇಲೆ ಆಣೆ ಮಾಡುತ್ತೇನೆ.

وَأَنتَ حِلُّۢ بِهَٰذَا ٱلۡبَلَدِ﴿٢

2ನೀವು ಈ ನಗರದ ವಾಸಿಯಾಗಿರುವಿರಿ.

وَوَالِدٖ وَمَا وَلَدَ﴿٣

3ತಂದೆ ಮತ್ತು ಮಕ್ಕಳ ಮೇಲಾಣೆ!

لَقَدۡ خَلَقۡنَا ٱلۡإِنسَٰنَ فِي كَبَدٍ﴿٤

4ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಬಹಳ ಕಷ್ಟಪಡುವಂತೆ ಸೃಷ್ಟಿಸಿದ್ದೇವೆ.

أَيَحۡسَبُ أَن لَّن يَقۡدِرَ عَلَيۡهِ أَحَدٞ﴿٥

5ಅವನು ಯಾರ ನಿಯಂತ್ರಣದಲ್ಲೂ ಇಲ್ಲವೆಂದು ಅವನು ಭಾವಿಸುತ್ತಾನೆಯೇ?

يَقُولُ أَهۡلَكۡتُ مَالٗا لُّبَدًا﴿٦

6ಅವನು ಹೇಳುತ್ತಾನೆ: “ನಾನು ಹೇರಳ ಸಂಪತ್ತು ಖರ್ಚು ಮಾಡಿದ್ದೇನೆ.”

أَيَحۡسَبُ أَن لَّمۡ يَرَهُۥٓ أَحَدٌ﴿٧

7ಅವನನ್ನು ಯಾರೂ ನೋಡುವುದಿಲ್ಲವೆಂದು ಅವನು ಭಾವಿಸುತ್ತಾನೆಯೇ?

أَلَمۡ نَجۡعَل لَّهُۥ عَيۡنَيۡنِ﴿٨

8ಅವನಿಗೆ ನಾವು ಎರಡು ಕಣ್ಣುಗಳನ್ನು ಕೊಡಲಿಲ್ಲವೇ?

وَلِسَانٗا وَشَفَتَيۡنِ﴿٩

9ಒಂದು ನಾಲಗೆ ಮತ್ತು ಎರಡು ತುಟಿಗಳನ್ನು?

وَهَدَيۡنَٰهُ ٱلنَّجۡدَيۡنِ﴿١٠

10ನಾವು ಅವನಿಗೆ ಎರಡು ಸ್ಪಷ್ಟ ಮಾರ್ಗಗಳನ್ನು ತೋರಿಸಿಕೊಟ್ಟೆವು.

فَلَا ٱقۡتَحَمَ ٱلۡعَقَبَةَ﴿١١

11ಆದರೆ ಅವನು ಆ ಘಾಟಿಯಲ್ಲಿ ಪ್ರವೇಶ ಮಾಡಿಲ್ಲ.

وَمَآ أَدۡرَىٰكَ مَا ٱلۡعَقَبَةُ﴿١٢

12ಆ ಘಾಟಿ ಏನೆಂದು ನಿಮಗೇನು ಗೊತ್ತು?

فَكُّ رَقَبَةٍ﴿١٣

13ಅದು ಗುಲಾಮನನ್ನು ಸ್ಪತಂತ್ರಗೊಳಿಸುವುದು,

أَوۡ إِطۡعَٰمٞ فِي يَوۡمٖ ذِي مَسۡغَبَةٖ﴿١٤

14ಅಥವಾ ಹಸಿವಿನ ದಿನದಲ್ಲಿ ಅನ್ನ ನೀಡುವುದು.

يَتِيمٗا ذَا مَقۡرَبَةٍ﴿١٥

15ಸಂಬಂಧಿಕನಾದ ಅನಾಥನಿಗೆ,

أَوۡ مِسۡكِينٗا ذَا مَتۡرَبَةٖ﴿١٦

16ಅಥವಾ ಬಡತನದಲ್ಲಿರುವ ದರಿದ್ರನಿಗೆ.

ثُمَّ كَانَ مِنَ ٱلَّذِينَ ءَامَنُواْ وَتَوَاصَوۡاْ بِٱلصَّبۡرِ وَتَوَاصَوۡاْ بِٱلۡمَرۡحَمَةِ﴿١٧

17ನಂತರ ಸತ್ಯವಿಶ್ವಾಸಿಗಳಲ್ಲಿ ಮತ್ತು ತಾಳ್ಮೆಯ ಉಪದೇಶ ನೀಡುವವರು ಹಾಗೂ ದಯೆಯ ಉಪದೇಶ ನೀಡುವವರಲ್ಲಿ ಸೇರುವುದು.

أُوْلَٰٓئِكَ أَصۡحَٰبُ ٱلۡمَيۡمَنَةِ﴿١٨

18ಅವರೇ ಬಲಭಾಗದ ಜನರು.

وَٱلَّذِينَ كَفَرُواْ بِـَٔايَٰتِنَا هُمۡ أَصۡحَٰبُ ٱلۡمَشۡـَٔمَةِ﴿١٩

19ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ ಅವರೇ ಎಡಭಾಗದ ಜನರು.

عَلَيۡهِمۡ نَارٞ مُّؤۡصَدَةُۢ﴿٢٠

20ಬೆಂಕಿಯು ಎಲ್ಲಾ ಕಡೆಗಳಿಂದಲೂ ಅವರನ್ನು ಮುಚ್ಚಿಕೊಳ್ಳುವುದು.

RELATED SURAHS