An-Nazi'at

النازعات

Those Who Drag Forth46 ayahsMeccan

بِسْمِ ٱللَّهِ ٱلرَّحْمَٰنِ ٱلرَّحِيمِ

وَٱلنَّٰزِعَٰتِ غَرۡقٗا﴿١

1(ದೇಹದೊಳಗೆ) ಧುಮುಕಿ (ಸತ್ಯನಿಷೇಧಿಗಳ ಆತ್ಮಗಳನ್ನು) ಕಠೋರವಾಗಿ ಎಳೆಯುವ ದೇವದೂತರ ಮೇಲಾಣೆ!

وَٱلنَّٰشِطَٰتِ نَشۡطٗا﴿٢

2(ಸತ್ಯವಿಶ್ವಾಸಿಗಳ ಆತ್ಮಗಳನ್ನು) ಸೌಮ್ಯವಾಗಿ ಎಳೆಯುವ ದೇವದೂತರ ಮೇಲಾಣೆ!

وَٱلسَّٰبِحَٰتِ سَبۡحٗا﴿٣

3ಈಜುತ್ತಾ ಚಲಿಸುವ ದೇವದೂತರ ಮೇಲಾಣೆ!

فَٱلسَّٰبِقَٰتِ سَبۡقٗا﴿٤

4ನಂತರ ದೌಡಾಯಿಸುತ್ತಾ ಮುಂದಕ್ಕೆ ಸಾಗುವ ದೇವದೂತರ ಮೇಲಾಣೆ!

فَٱلۡمُدَبِّرَٰتِ أَمۡرٗا﴿٥

5ಕಾರ್ಯಗಳನ್ನು ನಿಯಂತ್ರಿಸುವ ದೇವದೂತರ ಮೇಲಾಣೆ!

يَوۡمَ تَرۡجُفُ ٱلرَّاجِفَةُ﴿٦

6ನಡುಗಿಸುವಂತದ್ದು (ಪ್ರಥಮ ಊದುವಿಕೆ) ನಡುಗಿಸುವ ದಿನ!

تَتۡبَعُهَا ٱلرَّادِفَةُ﴿٧

7ಹಿಂಬಾಲಿಸಿ ಬರುವಂತದ್ದು (ಎರಡನೇ ಊದುವಿಕೆ) ಅದರ ಹಿಂದೆಯೇ ಬರುವುದು.

قُلُوبٞ يَوۡمَئِذٖ وَاجِفَةٌ﴿٨

8ಅಂದು ಬಹಳಷ್ಟು ಹೃದಯಗಳು ಢವಗುಡುತ್ತಿರುವುವು.

أَبۡصَٰرُهَا خَٰشِعَةٞ﴿٩

9ಅವರ ಕಣ್ಣುಗಳು ಕೆಳಭಾಗಕ್ಕೆ ತಗ್ಗಿರುವುವು.

يَقُولُونَ أَءِنَّا لَمَرۡدُودُونَ فِي ٱلۡحَافِرَةِ﴿١٠

10ಅವರು ಕೇಳುವರು: “ನಮ್ಮನ್ನು ನಮ್ಮ ಪೂರ್ವಸ್ಥಿತಿಗೆ ಮರಳಿಸಲಾಗುವುದೇ?

أَءِذَا كُنَّا عِظَٰمٗا نَّخِرَةٗ﴿١١

11ನಾವು ಕೊಳೆತ ಮೂಳೆಗಳಾಗಿ ಬಿಟ್ಟ ಬಳಿಕ!”

قَالُواْ تِلۡكَ إِذٗا كَرَّةٌ خَاسِرَةٞ﴿١٢

12ಅವರು ಹೇಳುವರು: “ಹಾಗಿದ್ದರೆ ಅದು ನಷ್ಟಭರಿತ ಮರಳುವಿಕೆಯಾಗಿದೆ.”

فَإِنَّمَا هِيَ زَجۡرَةٞ وَٰحِدَةٞ﴿١٣

13ಅದು ಕೇವಲ ಒಂದು (ಭಯಾನಕ) ಗದರಿಕೆಯಾಗಿದೆ.

فَإِذَا هُم بِٱلسَّاهِرَةِ﴿١٤

14ಆಗ ಅಗೋ ಅವರು ಒಂದು ಮೈದಾನದಲ್ಲಿ ಒಟ್ಟುಗೂಡುವರು!

هَلۡ أَتَىٰكَ حَدِيثُ مُوسَىٰٓ﴿١٥

15ಮೂಸಾರ ಸಮಾಚಾರವು ನಿಮಗೆ ತಲುಪಿದೆಯೇ?

إِذۡ نَادَىٰهُ رَبُّهُۥ بِٱلۡوَادِ ٱلۡمُقَدَّسِ طُوًى﴿١٦

16ಪವಿತ್ರ ತುವಾ ಕಣಿವೆಯಲ್ಲಿ ಅವರ ಪರಿಪಾಲಕನು (ಅಲ್ಲಾಹು) ಅವರನ್ನು ಕರೆದು ಹೇಳಿದ ಸಂದರ್ಭ:

ٱذۡهَبۡ إِلَىٰ فِرۡعَوۡنَ إِنَّهُۥ طَغَىٰ﴿١٧

17“ಫರೋಹನ ಬಳಿಗೆ ಹೋಗಿರಿ. ನಿಶ್ಚಯವಾಗಿಯೂ ಅವನು ಎಲ್ಲೆ ಮೀರಿ ವರ್ತಿಸಿದ್ದಾನೆ.

فَقُلۡ هَل لَّكَ إِلَىٰٓ أَن تَزَكَّىٰ﴿١٨

18ಅವನೊಡನೆ ಕೇಳಿರಿ: ನೀನು ಸ್ವಯಂ ಸಂಸ್ಕರಿಸಲು ಬಯಸುವೆಯಾ?

وَأَهۡدِيَكَ إِلَىٰ رَبِّكَ فَتَخۡشَىٰ﴿١٩

19ನಾನು ನಿನಗೆ ನಿನ್ನ ಪರಿಪಾಲಕನ (ಅಲ್ಲಾಹನ) ಮಾರ್ಗವನ್ನು ತೋರಿಸಿಕೊಡುವೆನು. ಅದರಿಂದ ನೀನು ದೇವಭಯವುಳ್ಳವನಾಗಬಹುದು.”

فَأَرَىٰهُ ٱلۡأٓيَةَ ٱلۡكُبۡرَىٰ﴿٢٠

20ಮೂಸಾ ಅವನಿಗೆ ಮಹಾ ದೃಷ್ಟಾಂತವನ್ನು ತೋರಿಸಿದರು.

فَكَذَّبَ وَعَصَىٰ﴿٢١

21ಆದರೆ ಅವನು ನಿಷೇಧಿಸಿದನು ಮತ್ತು ಅವಿಧೇಯತೆ ತೋರಿದನು.

ثُمَّ أَدۡبَرَ يَسۡعَىٰ﴿٢٢

22ನಂತರ ಅವನು (ತಂತ್ರಗಾರಿಕೆ ಮಾಡಲು) ಪರಿಶ್ರಮಿಸುತ್ತಾ ಹಿಂದಿರುಗಿ ಹೋದನು.

فَحَشَرَ فَنَادَىٰ﴿٢٣

23ನಂತರ ಎಲ್ಲರನ್ನೂ ಜಮಾವಣೆಗೊಳಿಸಿ ಘೋಷಿಸಿದನು.

فَقَالَ أَنَا۠ رَبُّكُمُ ٱلۡأَعۡلَىٰ﴿٢٤

24ಅವನು ಹೇಳಿದನು: “ನಾನು ನಿಮ್ಮ ಪರಮೋಚ್ಛ ದೇವನಾಗಿದ್ದೇನೆ.”

فَأَخَذَهُ ٱللَّهُ نَكَالَ ٱلۡأٓخِرَةِ وَٱلۡأُولَىٰٓ﴿٢٥

25ಆಗ ಅಲ್ಲಾಹು ಅವನನ್ನು ಪರಲೋಕ ಮತ್ತು ಇಹಲೋಕದ ಶಿಕ್ಷೆಗಾಗಿ ಹಿಡಿದನು.

إِنَّ فِي ذَٰلِكَ لَعِبۡرَةٗ لِّمَن يَخۡشَىٰٓ﴿٢٦

26ನಿಶ್ಚಯವಾಗಿಯೂ ಭಯಪಡುವವರಿಗೆ ಅದರಲ್ಲಿ ನೀತಿಪಾಠವಿದೆ.

ءَأَنتُمۡ أَشَدُّ خَلۡقًا أَمِ ٱلسَّمَآءُۚ بَنَىٰهَا﴿٢٧

27ನಿಮ್ಮನ್ನು ಸೃಷ್ಟಿಸುವುದು ಕಷ್ಟವೋ ಅಥವಾ ಆಕಾಶವನ್ನೋ? ಅವನು ಆಕಾಶವನ್ನು ನಿರ್ಮಿಸಿದನು.

رَفَعَ سَمۡكَهَا فَسَوَّىٰهَا﴿٢٨

28ಅದರ ಛಾವಣಿಯನ್ನು ಎತ್ತರಿಸಿದನು ಮತ್ತು ಅದನ್ನು ಸರಿಪಡಿಸಿದನು.

وَأَغۡطَشَ لَيۡلَهَا وَأَخۡرَجَ ضُحَىٰهَا﴿٢٩

29ಅದರ ರಾತ್ರಿಯನ್ನು ಕತ್ತಲೆಯಾಗಿ ಮಾಡಿದನು ಮತ್ತು ಅದರ ಹಗಲನ್ನು ಪ್ರತ್ಯಕ್ಷಗೊಳಿಸಿದನು.

وَٱلۡأَرۡضَ بَعۡدَ ذَٰلِكَ دَحَىٰهَآ﴿٣٠

30ಅದರ ನಂತರ ಅವನು ಭೂಮಿಯನ್ನು ವಿಸ್ತರಿಸಿದನು.

أَخۡرَجَ مِنۡهَا مَآءَهَا وَمَرۡعَىٰهَا﴿٣١

31ಅದರಿಂದ ನೀರನ್ನು ಮತ್ತು ಹುಲ್ಲುಗಾವಲುಗಳನ್ನು ಹೊರತೆಗೆದನು.

وَٱلۡجِبَالَ أَرۡسَىٰهَا﴿٣٢

32ಪರ್ವತಗಳನ್ನು ದೃಢವಾಗಿ ನಿಲ್ಲಿಸಿದನು.

مَتَٰعٗا لَّكُمۡ وَلِأَنۡعَٰمِكُمۡ﴿٣٣

33ಇವೆಲ್ಲವೂ ನಿಮ್ಮ ಮತ್ತು ನಿಮ್ಮ ಜಾನುವಾರುಗಳ ಉಪಯೋಗಕ್ಕಾಗಿ.

فَإِذَا جَآءَتِ ٱلطَّآمَّةُ ٱلۡكُبۡرَىٰ﴿٣٤

34ಆ ಮಹಾ ವಿಪತ್ತು (ಪುನರುತ್ಥಾನ ದಿನ) ಬರುವ ಸಂದರ್ಭ.

يَوۡمَ يَتَذَكَّرُ ٱلۡإِنسَٰنُ مَا سَعَىٰ﴿٣٥

35ಅಂದು ಮನುಷ್ಯನು ತಾನು ಮಾಡಿಟ್ಟ ಕರ್ಮಗಳನ್ನು ಸ್ಮರಿಸುವನು.

وَبُرِّزَتِ ٱلۡجَحِيمُ لِمَن يَرَىٰ﴿٣٦

36ನೋಡುಗರೆಲ್ಲರ ಮುಂದೆ ನರಕವನ್ನು ಪ್ರದರ್ಶಿಸಲಾಗುವುದು.

فَأَمَّا مَن طَغَىٰ﴿٣٧

37ಆದ್ದರಿಂದ ಯಾರು ಎಲ್ಲೆ ಮೀರಿದವನೋ,

وَءَاثَرَ ٱلۡحَيَوٰةَ ٱلدُّنۡيَا﴿٣٨

38ಮತ್ತು ಇಹಲೋಕಕ್ಕೆ ಪ್ರಾಶಸ್ತ್ಯ ನೀಡಿದವನೋ,

فَإِنَّ ٱلۡجَحِيمَ هِيَ ٱلۡمَأۡوَىٰ﴿٣٩

39ನಿಶ್ಚಯವಾಗಿಯೂ ನರಕವೇ ಅವನ ವಾಸಸ್ಥಳ.

وَأَمَّا مَنۡ خَافَ مَقَامَ رَبِّهِۦ وَنَهَى ٱلنَّفۡسَ عَنِ ٱلۡهَوَىٰ﴿٤٠

40ಯಾರು ತನ್ನ ಪರಿಪಾಲಕನ (ಅಲ್ಲಾಹನ) ಮುಂದೆ ನಿಲ್ಲುವುದನ್ನು ಭಯಪಟ್ಟನೋ ಮತ್ತು ತನ್ನ ದೇಹವನ್ನು ಸ್ವೇಚ್ಛೆಗಳಿಂದ ದೂರವಿಟ್ಟವನೋ,

فَإِنَّ ٱلۡجَنَّةَ هِيَ ٱلۡمَأۡوَىٰ﴿٤١

41ನಿಶ್ಚಯವಾಗಿಯೂ ಸ್ವರ್ಗವೇ ಅವನ ವಾಸಸ್ಥಳ.

يَسۡـَٔلُونَكَ عَنِ ٱلسَّاعَةِ أَيَّانَ مُرۡسَىٰهَا﴿٤٢

42ಅಂತ್ಯಸಮಯವು—ಅದು ಯಾವಾಗ ಸಂಭವಿಸುತ್ತದೆಯೆಂದು ಅವರು ನಿಮ್ಮಲ್ಲಿ ಕೇಳುತ್ತಾರೆ.

فِيمَ أَنتَ مِن ذِكۡرَىٰهَآ﴿٤٣

43ನಿಮಗೆ ಅದರ ಬಗ್ಗೆ ಏನು ಜ್ಞಾನವಿದೆ?

إِلَىٰ رَبِّكَ مُنتَهَىٰهَآ﴿٤٤

44ಅದರ ಆತ್ಯಂತಿಕ ಜ್ಞಾನವಿರುವುದು ನಿಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ಮಾತ್ರ.

إِنَّمَآ أَنتَ مُنذِرُ مَن يَخۡشَىٰهَا﴿٤٥

45ನೀವಂತೂ ಅದನ್ನು ಭಯಪಡುವವರಿಗೆ ಮುನ್ನೆಚ್ಚರಿಕೆ ನೀಡುವವರಾಗಿದ್ದೀರಿ.

كَأَنَّهُمۡ يَوۡمَ يَرَوۡنَهَا لَمۡ يَلۡبَثُوٓاْ إِلَّا عَشِيَّةً أَوۡ ضُحَىٰهَا﴿٤٦

46ಅವರು ಅದನ್ನು ನೋಡುವ ದಿನದಂದು, ದಿನದ ಕೊನೆಯ ಭಾಗ ಅಥವಾ ದಿನದ ಮೊದಲ ಭಾಗ ಮಾತ್ರ ಅವರು (ಭೂಮಿಯಲ್ಲಿ) ವಾಸವಾಗಿದ್ದರು ಎಂದು ಅವರಿಗೆ ಭಾಸವಾಗುವುದು.

RELATED SURAHS