التكوير
The Overthrowing • 29 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1ಸೂರ್ಯನನ್ನು ಹೊದಿಯಲಾಗುವಾಗ.
2ನಕ್ಷತ್ರಗಳು ಪ್ರಕಾಶರಹಿತವಾಗುವಾಗ.
3ಪರ್ವತಗಳನ್ನು ಚಲಿಸುವಂತೆ ಮಾಡಲಾಗುವಾಗ.
4ಪೂರ್ಣ ಬಸುರಿಗಳಾದ ಒಂಟೆಗಳನ್ನು ಉಪೇಕ್ಷಿಸಲಾಗುವಾಗ.[1]
5ವನ್ಯ ಮೃಗಗಳನ್ನು ಒಟ್ಟುಗೂಡಿಸಲಾಗುವಾಗ.[1]
6ಸಮುದ್ರಗಳನ್ನು ಧಗಧಗನೆ ಉರಿಸಲಾಗುವಾಗ.
7ಆತ್ಮಗಳನ್ನು (ದೇಹಗಳೊಂದಿಗೆ) ಜೋಡಿಸಲಾಗುವಾಗ.[1]
8ಜೀವಂತ ಹೂಳಲಾದ ಹೆಣ್ಣು ಮಗುವಿನೊಂದಿಗೆ ಕೇಳಲಾಗುವಾಗ.
9ಯಾವ ತಪ್ಪಿಗಾಗಿ ಅವಳನ್ನು ಕೊಲೆ ಮಾಡಲಾಯಿತೆಂದು.
10ಕರ್ಮಪುಸ್ತಕಗಳನ್ನು ತೆರೆಯಲಾಗುವಾಗ.
11ಆಕಾಶವನ್ನು ಕಳಚಲಾಗುವಾಗ.
12ನರಕವನ್ನು ಧಗಧಗನೆ ಉರಿಸಲಾಗುವಾಗ.
13ಸ್ವರ್ಗವನ್ನು ಸಮೀಪಕ್ಕೆ ತರಲಾಗುವಾಗ.
14ಅಂದು ಪ್ರತಿಯೊಬ್ಬ ವ್ಯಕ್ತಿಯೂ ತಾನು ಏನು ತಂದಿರುವೆನೆಂದು ತಿಳಿಯುವನು.
15ನಾನು ಹಿಂದಕ್ಕೆ ಸರಿಯುವ ನಕ್ಷತ್ರಗಳ ಮೇಲೆ ಆಣೆ ಮಾಡುತ್ತೇನೆ.
16ಚಲಿಸುವ ಮತ್ತು ಅಪ್ರತ್ಯಕ್ಷವಾಗುವ (ನಕ್ಷತ್ರಗಳ ಮೇಲೆ).
17ರಾತ್ರಿಯ ಮೇಲೆ, ಅದು ಸರಿಯುವಾಗ.
18ಪ್ರಭಾತದ ಮೇಲೆ, ಅದು ಬೆಳಗುವಾಗ.
19ನಿಶ್ಚಯವಾಗಿಯೂ ಇದು (ಕುರ್‌ಆನ್) ಒಬ್ಬ ಗೌರವಾನ್ವಿತ ದೂತರ (ಜಿಬ್ರೀಲ್) ಮಾತಾಗಿದೆ.[1]
20ಅವರು ಅತ್ಯಂತ ಶಕ್ತಿಶಾಲಿ ಮತ್ತು ಸಿಂಹಾಸನದ ಒಡೆಯನಾದ ಅಲ್ಲಾಹನ ಬಳಿ ಉನ್ನತ ಪದವಿಯುಳ್ಳವರಾಗಿದ್ದಾರೆ.
21(ಆಕಾಶಲೋಕದಲ್ಲಿ) ಅವರನ್ನು ಅನುಸರಿಸಲಾಗುತ್ತದೆ ಮತ್ತು ಅವರು ವಿಶ್ವಾಸಯೋಗ್ಯರಾಗಿದ್ದಾರೆ.
22ನಿಶ್ಚಯವಾಗಿಯೂ ನಿಮ್ಮ ಸಂಗಡಿಗರು (ಪ್ರವಾದಿ) ಮಾನಸಿಕ ಅಸ್ವಸ್ಥರಲ್ಲ.
23ಅವರು ಅವರನ್ನು (ಜಿಬ್ರೀಲರನ್ನು) ಪ್ರತ್ಯಕ್ಷ ದಿಗಂತದಲ್ಲಿ ನೋಡಿದ್ದಾರೆ.
24ಅವರು ಅದೃಶ್ಯ ವಿಷಯಗಳನ್ನು ತಿಳಿಸುವ ವಿಷಯದಲ್ಲಿ ಜಿಪುಣತನ ತೋರುವುದಿಲ್ಲ.[1]
25ಇದು (ಕುರ್‌ಆನ್) ಬಹಿಷ್ಕೃತನಾದ ಶೈತಾನನ ಮಾತುಗಳಲ್ಲ.
26ಆದರೂ ನೀವು ಎಲ್ಲಿಗೆ ಹೋಗುತ್ತಿದ್ದೀರಿ?
27ಇದು ಸರ್ವಲೋಕದ ಜನರಿಗೆ ಒಂದು ಉಪದೇಶವಾಗಿದೆ.
28(ವಿಶೇಷವಾಗಿ) ನಿಮ್ಮ ಪೈಕಿ ನೇರ ಮಾರ್ಗದಲ್ಲಿ ಚಲಿಸಲು ಇಚ್ಛಿಸುವವರಿಗೆ.
29ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹು ಇಚ್ಛಿಸದೆ ನೀವು ಇಚ್ಛಿಸುವುದಿಲ್ಲ.