Al-Infitar

الانفطار

The Cleaving19 ayahsMeccan

بِسْمِ ٱللَّهِ ٱلرَّحْمَٰنِ ٱلرَّحِيمِ

إِذَا ٱلسَّمَآءُ ٱنفَطَرَتۡ﴿١

1ಆಕಾಶವು ಒಡೆದು ಸೀಳುವಾಗ.

وَإِذَا ٱلۡكَوَاكِبُ ٱنتَثَرَتۡ﴿٢

2ನಕ್ಷತ್ರಗಳು ಉದುರಿ ಬೀಳುವಾಗ.

وَإِذَا ٱلۡبِحَارُ فُجِّرَتۡ﴿٣

3ಸಮುದ್ರಗಳು ಉಕ್ಕಿ ಹರಿಯುವಾಗ.

وَإِذَا ٱلۡقُبُورُ بُعۡثِرَتۡ﴿٤

4ಸಮಾಧಿಗಳು ಬುಡಮೇಲಾಗುವಾಗ.

عَلِمَتۡ نَفۡسٞ مَّا قَدَّمَتۡ وَأَخَّرَتۡ﴿٥

5ಆಗ ಮನುಷ್ಯನು ತಾನು ಮುಂದಕ್ಕೆ ಕಳುಹಿಸಿದ ಮತ್ತು ಹಿಂದೆ ಉಳಿಸಿದ (ಕರ್ಮಗಳನ್ನು) ತಿಳಿಯುವನು.

يَٰٓأَيُّهَا ٱلۡإِنسَٰنُ مَا غَرَّكَ بِرَبِّكَ ٱلۡكَرِيمِ﴿٦

6ಓ ಮನುಷ್ಯನೇ! ಅತ್ಯುದಾರಿಯಾದ ನಿನ್ನ ಪರಿಪಾಲಕನ (ಅಲ್ಲಾಹನ) ವಿಷಯದಲ್ಲಿ ನಿನ್ನನ್ನು ವಂಚಿಸಿದ್ದೇನು?

ٱلَّذِي خَلَقَكَ فَسَوَّىٰكَ فَعَدَلَكَ﴿٧

7ಅವನು (ಅಲ್ಲಾಹು) ಯಾರೆಂದರೆ ನಿನ್ನನ್ನು ಸೃಷ್ಟಿಸಿದವನು, ನಿನ್ನನ್ನು ಸರಿಪಡಿಸಿದವನು ಮತ್ತು ನಿನ್ನನ್ನು ಸಮತೋಲನಗೊಳಿಸಿದವನು.

فِيٓ أَيِّ صُورَةٖ مَّا شَآءَ رَكَّبَكَ﴿٨

8ಅವನು ಇಚ್ಛಿಸಿದ ರೂಪದಲ್ಲಿ ನಿನ್ನನ್ನು ಜೋಡಿಸಿದವನು.

كَلَّا بَلۡ تُكَذِّبُونَ بِٱلدِّينِ﴿٩

9ಇಲ್ಲವೇ ಇಲ್ಲ, ವಾಸ್ತವವಾಗಿ ನೀವು ಪ್ರತಿಫಲದ ದಿನವನ್ನು ನಿಷೇಧಿಸುತ್ತಿದ್ದೀರಿ.

وَإِنَّ عَلَيۡكُمۡ لَحَٰفِظِينَ﴿١٠

10ನಿಶ್ಚಯವಾಗಿಯೂ ನಿಮ್ಮ ಮೇಲೆ ನಿಗಾ ವಹಿಸುವವರಿದ್ದಾರೆ.

كِرَامٗا كَٰتِبِينَ﴿١١

11ಗೌರವಾನ್ವಿತ ಬರಹಗಾರರು.

يَعۡلَمُونَ مَا تَفۡعَلُونَ﴿١٢

12ನೀವು ಮಾಡುವುದೆಲ್ಲವನ್ನೂ ಅವರು ತಿಳಿಯುತ್ತಾರೆ.

إِنَّ ٱلۡأَبۡرَارَ لَفِي نَعِيمٖ﴿١٣

13ನಿಶ್ಚಯವಾಗಿಯೂ ಸತ್ಕರ್ಮಿಗಳು ಸುಖದ ಸುಪ್ಪತ್ತಿಗೆಯಲ್ಲಿರುವರು.

وَإِنَّ ٱلۡفُجَّارَ لَفِي جَحِيمٖ﴿١٤

14ನಿಶ್ಚಯವಾಗಿಯೂ ದುಷ್ಕರ್ಮಿಗಳು ಧಗಧಗಿಸುವ ನರಕದಲ್ಲಿರುವರು.

يَصۡلَوۡنَهَا يَوۡمَ ٱلدِّينِ﴿١٥

15ಪ್ರತಿಫಲ ದಿನದಂದು ಅವರು ಅದನ್ನು ಪ್ರವೇಶಿಸುವರು.

وَمَا هُمۡ عَنۡهَا بِغَآئِبِينَ﴿١٦

16ಅವರಿಗೆ ಅದರಿಂದ ಅನುಪಸ್ಥಿತರಾಗಲು ಸಾಧ್ಯವಾಗುವುದಿಲ್ಲ.

وَمَآ أَدۡرَىٰكَ مَا يَوۡمُ ٱلدِّينِ﴿١٧

17ಪ್ರತಿಫಲದ ದಿನ ಏನೆಂದು ನಿಮಗೇನು ಗೊತ್ತು?

ثُمَّ مَآ أَدۡرَىٰكَ مَا يَوۡمُ ٱلدِّينِ﴿١٨

18ಪುನಃ (ಕೇಳುತ್ತೇನೆ). ಪ್ರತಿಫಲದ ದಿನ ಏನೆಂದು ನಿಮಗೇನು ಗೊತ್ತು?

يَوۡمَ لَا تَمۡلِكُ نَفۡسٞ لِّنَفۡسٖ شَيۡـٔٗاۖ وَٱلۡأَمۡرُ يَوۡمَئِذٖ لِّلَّهِ﴿١٩

19ಅಂದು ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗಾಗಿ ಏನೂ ಅಧೀನದಲ್ಲಿಟ್ಟುಕೊಳ್ಳುವುದಿಲ್ಲ! ಅಂದು ಎಲ್ಲಾ ಆಜ್ಞೆಗಳು ಅಲ್ಲಾಹನದ್ದಾಗಿರುವುದು.

RELATED SURAHS