Az-Zalzalah

الزلزلة

The Earthquake8 ayahsMedinan

بِسْمِ ٱللَّهِ ٱلرَّحْمَٰنِ ٱلرَّحِيمِ

إِذَا زُلۡزِلَتِ ٱلۡأَرۡضُ زِلۡزَالَهَا﴿١

1ಭೂಮಿಯನ್ನು ಸಂಪೂರ್ಣವಾಗಿ ನಡುಗಿಸಲಾಗುವಾಗ,

وَأَخۡرَجَتِ ٱلۡأَرۡضُ أَثۡقَالَهَا﴿٢

2ಅದು (ಭೂಮಿ) ಅದರ ಭಾರಗಳನ್ನು ಹೊರಹಾಕುವಾಗ,[1]

وَقَالَ ٱلۡإِنسَٰنُ مَا لَهَا﴿٣

3“ಇದಕ್ಕೇನಾಗಿದೆ?” ಎಂದು ಮನುಷ್ಯನು ಕೇಳುವನು.

يَوۡمَئِذٖ تُحَدِّثُ أَخۡبَارَهَا﴿٤

4ಅಂದು ಅದು (ಭೂಮಿ) ತನ್ನ ಎಲ್ಲಾ ಸಮಾಚಾರಗಳನ್ನು ತಿಳಿಸುವುದು.

بِأَنَّ رَبَّكَ أَوۡحَىٰ لَهَا﴿٥

5ನಿಮ್ಮ ಪರಿಪಾಲಕನು (ಅಲ್ಲಾಹು) ಅದಕ್ಕೆ ಆದೇಶ ನೀಡಿದ ಕಾರಣದಿಂದ.

يَوۡمَئِذٖ يَصۡدُرُ ٱلنَّاسُ أَشۡتَاتٗا لِّيُرَوۡاْ أَعۡمَٰلَهُمۡ﴿٦

6ಅಂದು ಮನುಷ್ಯರು ವಿಭಿನ್ನ ಗುಂಪುಗಳಾಗಿ ಮರಳುವರು—ಅವರಿಗೆ ಅವರ ಕರ್ಮಗಳನ್ನು ತೋರಿಸಲಾಗುವುದಕ್ಕಾಗಿ.

فَمَن يَعۡمَلۡ مِثۡقَالَ ذَرَّةٍ خَيۡرٗا يَرَهُۥ﴿٧

7ಆದ್ದರಿಂದ ಯಾರು ಒಂದು ಅಣುವಿನ ತೂಕದಷ್ಟು ಒಳಿತು ಮಾಡಿದ್ದಾನೋ ಅವನು ಅದನ್ನು ನೋಡುವನು.

وَمَن يَعۡمَلۡ مِثۡقَالَ ذَرَّةٖ شَرّٗا يَرَهُۥ﴿٨

8ಯಾರು ಒಂದು ಅಣುವಿನ ತೂಕದಷ್ಟು ಕೆಡುಕು ಮಾಡಿದ್ದಾನೋ ಅವನು ಅದನ್ನು ನೋಡುವನು.

RELATED SURAHS