العاديات
The Chargers • 11 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1ಏದುಸಿರು ಬಿಡುತ್ತಾ ದೌಡಾಯಿಸುವ ಕುದುರೆಗಳ ಮೇಲಾಣೆ!
2ಗೊರಸನ್ನು ಕಲ್ಲಿಗೆ ಉಜ್ಜಿ ಬೆಂಕಿ ಕಿಡಿ ಹಾರಿಸುವವುಗಳ ಮೇಲಾಣೆ!
3ಮುಂಜಾನೆಯ ಸಮಯದಲ್ಲಿ ಆಕ್ರಮಣ ಮಾಡುವವುಗಳ ಮೇಲಾಣೆ!
4ಆಗ ಅವು ಧೂಳನ್ನು ಹರಡುತ್ತವೆ.
5ನಂತರ ಅದರ ಮೂಲಕ ಸೈನ್ಯಗಳ ನಡುಭಾಗಕ್ಕೆ ನುಗ್ಗುತ್ತವೆ.
6ನಿಶ್ಚಯವಾಗಿಯೂ ಮನುಷ್ಯನು ತನ್ನ ಪರಿಪಾಲಕನಿಗೆ (ಅಲ್ಲಾಹನಿಗೆ) ಕೃತಜ್ಞತೆಯಿಲ್ಲದವನಾಗಿದ್ದಾನೆ.
7ನಿಶ್ಚಯವಾಗಿಯೂ ಅವನೇ ಅದಕ್ಕೆ ಸಾಕ್ಷಿಯಾಗಿದ್ದಾನೆ.
8ಅವನಿಗೆ ಸಂಪತ್ತಿನ ಮೇಲೆ ಅತಿಯಾದ ಮೋಹವಿದೆ.
9ಸಮಾಧಿಗಳಲ್ಲಿರುವುದನ್ನು ಹೊರತೆಗೆಯಲಾಗುವ ಆ ಸಮಯದ ಬಗ್ಗೆ ಅವನಿಗೆ ತಿಳಿದಿಲ್ಲವೇ?
10ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗಪಡಿಸಲಾಗುವ (ಆ ಸಮಯದ ಬಗ್ಗೆ).
11ನಿಶ್ಚಯವಾಗಿಯೂ ಅಂದು ಅವರ ಪರಿಪಾಲಕನು (ಅಲ್ಲಾಹು) ಅವರ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ.