الأعلى
The Most High • 19 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1ಅತ್ಯುನ್ನತನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರಿನ ಪರಿಶುದ್ಧಿಯನ್ನು ಕೊಂಡಾಡಿರಿ.
2ಅವನು ಯಾರೆಂದರೆ ಸೃಷ್ಟಿಸಿದವನು ಮತ್ತು ಸರಿಪಡಿಸಿದವನು,
3(ಸರಿಯಾಗಿ) ನಿರ್ಣಯಿಸಿದವನು ಮತ್ತು ಮಾರ್ಗದರ್ಶನ ಮಾಡಿದವನು,
4ಹಸಿರು ಹಲ್ಲುಗಾವಲನ್ನು ಉಂಟು ಮಾಡಿದವನು,
5ನಂತರ ಅವನು ಅದನ್ನು (ಒಣಗುವಂತೆ ಮಾಡಿ) ಕಪ್ಪು ಕಸಕಡ್ಡಿಗಳಾಗಿ ಪರಿವರ್ತಿಸಿದನು.
6ನಾವು ನಿಮಗೆ ಓದಿಕೊಡುವೆವು. ನಂತರ ನೀವು ಮರೆಯಲಾರಿರಿ.
7ಅಲ್ಲಾಹು ಇಚ್ಛಿಸುವುದರ ಹೊರತಾಗಿ. ಅವನು ಬಹಿರಂಗವಾಗಿರುವುದನ್ನು ಮತ್ತು ರಹಸ್ಯವಾಗಿರುವುದನ್ನು ತಿಳಿಯುತ್ತಾನೆ.
8ನಾವು ನಿಮಗೆ ಸುಲಭ ಮಾಡಿಕೊಡುವೆವು.
9ಆದ್ದರಿಂದ ನೀವು ಉಪದೇಶ ನೀಡಿರಿ. ಉಪದೇಶವು ಪ್ರಯೋಜನ ನೀಡುವುದಾದರೆ.
10ಭಯಪಡುವವನು ಉಪದೇಶವನ್ನು ಸ್ವೀಕರಿಸುವನು.
11ನತದೃಷ್ಟನು ಆ ಉಪದೇಶದಿಂದ ದೂರ ಸರಿಯುವನು.
12ಅವನು ಯಾರೆಂದರೆ ಅತಿದೊಡ್ಡ ಅಗ್ನಿಯನ್ನು ಪ್ರವೇಶಿಸುವವನು.
13ನಂತರ ಅವನು ಅಲ್ಲಿ ಸಾಯುವುದಿಲ್ಲ, ಬದುಕುವುದೂ ಇಲ್ಲ.
14ನಿಶ್ಚಯವಾಗಿಯೂ ಪರಿಶುದ್ಧತೆ ಪಡೆದವನು ಯಶಸ್ವಿಯಾದನು.
15ತನ್ನ ಪರಿಪಾಲಕನ (ಅಲ್ಲಾಹನ) ಹೆಸರನ್ನು ಸ್ಮರಿಸಿದವನು ಮತ್ತು ನಮಾಝ್ ಮಾಡಿದವನು.
16ಆದರೆ ನೀವು ಇಹಲೋಕ ಜೀವನಕ್ಕೆ ಪ್ರಾಶಸ್ತ್ಯ ನೀಡುತ್ತೀರಿ.
17ಪರಲೋಕವು ಅತಿಶ್ರೇಷ್ಠ ಮತ್ತು ಶಾಶ್ವತವಾಗಿದೆ.
18ಈ ಮಾತುಗಳು ಹಿಂದಿನ ಗ್ರಂಥಗಳಲ್ಲಿವೆ.
19ಇಬ್ರಾಹೀಮ್ ಮತ್ತು ಮೂಸಾರ ಗ್ರಂಥಗಳಲ್ಲಿ.