Al-Ghashiyah

الغاشية

The Overwhelming26 ayahsMeccan

بِسْمِ ٱللَّهِ ٱلرَّحْمَٰنِ ٱلرَّحِيمِ

هَلۡ أَتَىٰكَ حَدِيثُ ٱلۡغَٰشِيَةِ﴿١

1ಆ ಮುಚ್ಚುವ ಘಟನೆಯ (ಪುನರುತ್ಥಾನ ದಿನದ) ಸಮಾಚಾರವು ನಿಮಗೆ ತಲುಪಿದೆಯೇ?

وُجُوهٞ يَوۡمَئِذٍ خَٰشِعَةٌ﴿٢

2ಅಂದು ಬಹಳಷ್ಟು ಮುಖಗಳು ದೀನವಾಗಿರುವುವು.

عَامِلَةٞ نَّاصِبَةٞ﴿٣

3ಅವರು ಪರಿಶ್ರಮಪಟ್ಟಿರುವರು ಮತ್ತು ಸುಸ್ತಾಗಿರುವರು.

تَصۡلَىٰ نَارًا حَامِيَةٗ﴿٤

4ಅವರು ತೀವ್ರ ಶಾಖದ ಬೆಂಕಿಯನ್ನು ಪ್ರವೇಶ ಮಾಡುವರು.

تُسۡقَىٰ مِنۡ عَيۡنٍ ءَانِيَةٖ﴿٥

5ಕೊತಕೊತ ಕುದಿಯುವ ಒರತೆಯ ನೀರನ್ನು ಅವರಿಗೆ ಕುಡಿಸಲಾಗುವುದು.

لَّيۡسَ لَهُمۡ طَعَامٌ إِلَّا مِن ضَرِيعٖ﴿٦

6ಅವರಿಗೆ ಮುಳ್ಳಿನ ಮರದಿಂದಲೇ ಹೊರತು ಬೇರೆ ಯಾವುದೇ ಆಹಾರವಿಲ್ಲ.

لَّا يُسۡمِنُ وَلَا يُغۡنِي مِن جُوعٖ﴿٧

7ಅದು ಪೋಷಣೆ ನೀಡುವುದಿಲ್ಲ. ಹಸಿವೆಯನ್ನು ನೀಗಿಸುವುದಿಲ್ಲ.

وُجُوهٞ يَوۡمَئِذٖ نَّاعِمَةٞ﴿٨

8ಅಂದು ಬಹಳಷ್ಟು ಮುಖಗಳು ಶುಭ್ರ ತಾಜಾತನದಿಂದ ಹೊಳೆಯುತ್ತಿರುವುವು.

لِّسَعۡيِهَا رَاضِيَةٞ﴿٩

9ಅವರು ತಮ್ಮ ಪರಿಶ್ರಮದ ಬಗ್ಗೆ ಸಂತೃಪ್ತರಾಗಿರುವರು.

فِي جَنَّةٍ عَالِيَةٖ﴿١٠

10ಅವರು ಉನ್ನತ ಸ್ವರ್ಗಗಳಲ್ಲಿರುವರು.

لَّا تَسۡمَعُ فِيهَا لَٰغِيَةٗ﴿١١

11ಅವರು ಅಲ್ಲಿ ಅನಗತ್ಯ ಮಾತುಗಳನ್ನು ಕೇಳುವುದಿಲ್ಲ.

فِيهَا عَيۡنٞ جَارِيَةٞ﴿١٢

12ಅದರಲ್ಲಿ ಹರಿಯುವ ತೊರೆಯಿದೆ.

فِيهَا سُرُرٞ مَّرۡفُوعَةٞ﴿١٣

13ಅಲ್ಲಿ ಎತ್ತರದ ಮಂಚಗಳಿವೆ.

وَأَكۡوَابٞ مَّوۡضُوعَةٞ﴿١٤

14ಜೋಡಿಸಿಡಲಾದ ಲೋಟಗಳಿವೆ.

وَنَمَارِقُ مَصۡفُوفَةٞ﴿١٥

15ಸಾಲಾಗಿಡಲಾದ ದಿಂಬುಗಳಿವೆ.

وَزَرَابِيُّ مَبۡثُوثَةٌ﴿١٦

16ಹರಡಿಕೊಂಡಿರುವ ಜಮಖಾನೆಗಳಿವೆ.

أَفَلَا يَنظُرُونَ إِلَى ٱلۡإِبِلِ كَيۡفَ خُلِقَتۡ﴿١٧

17ಅವರು ಒಂಟೆಯನ್ನು ನೋಡುವುದಿಲ್ಲವೇ—ಅದನ್ನು ಹೇಗೆ ಸೃಷ್ಟಿಸಲಾಗಿದೆಯೆಂದು?

وَإِلَى ٱلسَّمَآءِ كَيۡفَ رُفِعَتۡ﴿١٨

18ಆಕಾಶವನ್ನು—ಅದನ್ನು ಹೇಗೆ ಎತ್ತರಿಸಲಾಗಿದೆಯೆಂದು?

وَإِلَى ٱلۡجِبَالِ كَيۡفَ نُصِبَتۡ﴿١٩

19ಪರ್ವತಗಳನ್ನು—ಅವುಗಳನ್ನು ಹೇಗೆ ದೃಢವಾಗಿ ನಿಲ್ಲಿಸಲಾಗಿದೆಯೆಂದು?

وَإِلَى ٱلۡأَرۡضِ كَيۡفَ سُطِحَتۡ﴿٢٠

20ಭೂಮಿಯನ್ನು—ಅದನ್ನು ಹೇಗೆ ಹರಡಲಾಗಿದೆಯೆಂದು?

فَذَكِّرۡ إِنَّمَآ أَنتَ مُذَكِّرٞ﴿٢١

21(ಪ್ರವಾದಿಯವರೇ) ನೀವು ಉಪದೇಶ ನೀಡಿರಿ. ನೀವೊಬ್ಬ ಉಪದೇಶಕರು ಮಾತ್ರ.

لَّسۡتَ عَلَيۡهِم بِمُصَيۡطِرٍ﴿٢٢

22ನೀವು ಅವರ ಮೇಲೆ ಅಧಿಕಾರವಿರುವವರಲ್ಲ.

إِلَّا مَن تَوَلَّىٰ وَكَفَرَ﴿٢٣

23ಆದರೆ ವಿಮುಖನಾಗುವವನು ಮತ್ತು ನಿಷೇಧಿಸುವವನು ಯಾರೋ,

فَيُعَذِّبُهُ ٱللَّهُ ٱلۡعَذَابَ ٱلۡأَكۡبَرَ﴿٢٤

24ಅವನಿಗೆ ಅಲ್ಲಾಹು ಅತಿದೊಡ್ಡ ಶಿಕ್ಷೆಯನ್ನು ನೀಡುವನು.

إِنَّ إِلَيۡنَآ إِيَابَهُمۡ﴿٢٥

25ನಿಶ್ಚಯವಾಗಿಯೂ ಅವರು ಮರಳಿ ಬರುವುದು ನಮ್ಮ ಬಳಿಗೇ ಆಗಿದೆ.

ثُمَّ إِنَّ عَلَيۡنَا حِسَابَهُم﴿٢٦

26ನಂತರ ಅವರನ್ನು ವಿಚಾರಣೆ ಮಾಡುವುದು ನಮ್ಮ ಹೊಣೆಯಾಗಿದೆ.

RELATED SURAHS