At-Tariq

الطارق

The Night Comer17 ayahsMeccan

بِسْمِ ٱللَّهِ ٱلرَّحْمَٰنِ ٱلرَّحِيمِ

وَٱلسَّمَآءِ وَٱلطَّارِقِ﴿١

1ಆಕಾಶದ ಮೇಲಾಣೆ. ರಾತ್ರಿಯಲ್ಲಿ ಪ್ರತ್ಯಕ್ಷವಾಗುವುದರ ಮೇಲಾಣೆ!

وَمَآ أَدۡرَىٰكَ مَا ٱلطَّارِقُ﴿٢

2ರಾತ್ರಿಯಲ್ಲಿ ಪ್ರತ್ಯಕ್ಷವಾಗುವುದು ಏನೆಂದು ನಿಮಗೇನು ಗೊತ್ತು?

ٱلنَّجۡمُ ٱلثَّاقِبُ﴿٣

3ಅದು ಬೆಳಗುವ ನಕ್ಷತ್ರವಾಗಿದೆ.

إِن كُلُّ نَفۡسٖ لَّمَّا عَلَيۡهَا حَافِظٞ﴿٤

4ನಿಗಾವಣೆಯಲ್ಲಿರುವ ದೇವದೂತರಿಲ್ಲದ ಯಾವುದೇ ವ್ಯಕ್ತಿಯೂ ಇಲ್ಲ.[1]

فَلۡيَنظُرِ ٱلۡإِنسَٰنُ مِمَّ خُلِقَ﴿٥

5ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂದು ಮನುಷ್ಯನು ನೋಡಿಕೊಳ್ಳಲಿ.

خُلِقَ مِن مَّآءٖ دَافِقٖ﴿٦

6ಅವನನ್ನು ಚಿಮ್ಮುವ ದ್ರವದಿಂದ ಸೃಷ್ಟಿಸಲಾಗಿದೆ.

يَخۡرُجُ مِنۢ بَيۡنِ ٱلصُّلۡبِ وَٱلتَّرَآئِبِ﴿٧

7ಅದು ಬೆನ್ನು ಮತ್ತು ಪಕ್ಕೆಲುಬುಗಳ ನಡುವಿನಿಂದ ಹೊರಬರುತ್ತದೆ.

إِنَّهُۥ عَلَىٰ رَجۡعِهِۦ لَقَادِرٞ﴿٨

8ನಿಶ್ಚಯವಾಗಿಯೂ ಅವನನ್ನು ಮರಳಿ ತರಲು (ಮರಳಿ ಸೃಷ್ಟಿಸಲು) ಅಲ್ಲಾಹನಿಗೆ ಸಾಮರ್ಥ್ಯವಿದೆ.

يَوۡمَ تُبۡلَى ٱلسَّرَآئِرُ﴿٩

9ಮರೆಯಾಗಿರುವ ರಹಸ್ಯಗಳನ್ನು ತನಿಖೆ ಮಾಡಲಾಗುವ ದಿನ![1]

فَمَا لَهُۥ مِن قُوَّةٖ وَلَا نَاصِرٖ﴿١٠

10ಆಗ ಮನುಷ್ಯನ ಬಳಿ ಯಾವುದೇ ಶಕ್ತಿ ಅಥವಾ ಸಹಾಯಕರು ಇರುವುದಿಲ್ಲ.

وَٱلسَّمَآءِ ذَاتِ ٱلرَّجۡعِ﴿١١

11ಮಳೆಯನ್ನು ಸುರಿಸುವ ಆಕಾಶದ ಮೇಲಾಣೆ!

وَٱلۡأَرۡضِ ذَاتِ ٱلصَّدۡعِ﴿١٢

12ಸೀಳುವ ಭೂಮಿಯ ಮೇಲಾಣೆ!

إِنَّهُۥ لَقَوۡلٞ فَصۡلٞ﴿١٣

13ನಿಶ್ಚಯವಾಗಿಯೂ ಇದು (ಕುರ್‌ಆನ್) ನಿರ್ಣಾಯಕ ಮಾತಾಗಿದೆ.

وَمَا هُوَ بِٱلۡهَزۡلِ﴿١٤

14ಇದು ಹಾಸ್ಯದ ಮಾತುಗಳಲ್ಲ.

إِنَّهُمۡ يَكِيدُونَ كَيۡدٗا﴿١٥

15ನಿಶ್ಚಯವಾಗಿಯೂ ಅವರು ತಂತ್ರಗಾರಿಕೆ ಮಾಡುತ್ತಿದ್ದಾರೆ.

وَأَكِيدُ كَيۡدٗا﴿١٦

16ನಾನು ಕೂಡ ತಂತ್ರಗಾರಿಕೆ ಮಾಡುತ್ತಿದ್ದೇನೆ.

فَمَهِّلِ ٱلۡكَٰفِرِينَ أَمۡهِلۡهُمۡ رُوَيۡدَۢا﴿١٧

17ಸತ್ಯನಿಷೇಧಿಗಳಿಗೆ ಕಾಲಾವಕಾಶ ನೀಡಿರಿ. ಅವರನ್ನು ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟುಬಿಡಿ.

RELATED SURAHS