As-Saffat

الصافات

Those Ranged in Ranks182 ayahsMeccan

بِسْمِ ٱللَّهِ ٱلرَّحْمَٰنِ ٱلرَّحِيمِ

وَٱلصَّٰٓفَّٰتِ صَفّٗا﴿١

1ಸಾಲುಗಟ್ಟಿ ನಿಂತ ದೇವದೂತರುಗಳ ಮೇಲಾಣೆ!

فَٱلزَّٰجِرَٰتِ زَجۡرٗا﴿٢

2ತೀಕ್ಷ್ಣವಾಗಿ ಗದರಿಸುವವರ ಮೇಲಾಣೆ!

فَٱلتَّٰلِيَٰتِ ذِكۡرًا﴿٣

3ಉಪದೇಶವನ್ನು ಪಠಿಸುವವರ ಮೇಲಾಣೆ!

إِنَّ إِلَٰهَكُمۡ لَوَٰحِدٞ﴿٤

4ಖಂಡಿತವಾಗಿಯೂ ನಿಮ್ಮ ದೇವನು ಏಕೈಕನಾಗಿದ್ದಾನೆ.

رَّبُّ ٱلسَّمَٰوَٰتِ وَٱلۡأَرۡضِ وَمَا بَيۡنَهُمَا وَرَبُّ ٱلۡمَشَٰرِقِ﴿٥

5ಅವನು ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಪರಿಪಾಲಕ ಹಾಗೂ ಉದಯ ಸ್ಥಾನಗಳ ಪರಿಪಾಲಕನಾಗಿದ್ದಾನೆ.

إِنَّا زَيَّنَّا ٱلسَّمَآءَ ٱلدُّنۡيَا بِزِينَةٍ ٱلۡكَوَاكِبِ﴿٦

6ನಿಶ್ಚಯವಾಗಿಯೂ ನಾವು ಸಮೀಪದ ಆಕಾಶವನ್ನು ನಕ್ಷತ್ರಗಳ ಶೃಂಗಾರದಿಂದ ಅಲಂಕರಿಸಿದ್ದೇವೆ.

وَحِفۡظٗا مِّن كُلِّ شَيۡطَٰنٖ مَّارِدٖ﴿٧

7ವಿದ್ರೋಹಿಗಳಾದ ಎಲ್ಲಾ ಶೈತಾನರಿಂದ ನಾವು ಅದನ್ನು ಭದ್ರಪಡಿಸಿದ್ದೇವೆ.

لَّا يَسَّمَّعُونَ إِلَى ٱلۡمَلَإِ ٱلۡأَعۡلَىٰ وَيُقۡذَفُونَ مِن كُلِّ جَانِبٖ﴿٨

8ಉಪರಿಲೋಕದ ದೇವದೂತರುಗಳ ಮಾತುಗಳಿಗೆ ಕಿವಿಗೊಡಲು ಅವರಿಗೆ ಸಾಧ್ಯವಾಗುವುದಿಲ್ಲ. ಎಲ್ಲಾ ದಿಕ್ಕುಗಳಿಂದಲೂ ಅವರಿಗೆ ಎಸೆಯಲಾಗುತ್ತದೆ.

دُحُورٗاۖ وَلَهُمۡ عَذَابٞ وَاصِبٌ﴿٩

9ಅವರನ್ನು ಓಡಿಸುವುದಕ್ಕಾಗಿ. ಅವರಿಗೆ ಶಾಶ್ವತ ಶಿಕ್ಷೆಯೂ ಇದೆ.

إِلَّا مَنۡ خَطِفَ ٱلۡخَطۡفَةَ فَأَتۡبَعَهُۥ شِهَابٞ ثَاقِبٞ﴿١٠

10ಆದರೆ, ಅವರಲ್ಲಿ ಯಾರಾದರೂ (ದೇವದೂತರ) ಮಾತನ್ನು ಕದ್ದು ಕೇಳಿ ಓಡಿದರೆ, (ತಕ್ಷಣ) ಜ್ವಲಿಸುವ ಒಂದು ಜ್ವಾಲೆಯು ಅವನನ್ನು ಹಿಂಬಾಲಿಸುತ್ತದೆ.

فَٱسۡتَفۡتِهِمۡ أَهُمۡ أَشَدُّ خَلۡقًا أَم مَّنۡ خَلَقۡنَآۚ إِنَّا خَلَقۡنَٰهُم مِّن طِينٖ لَّازِبِۭ﴿١١

11(ಪ್ರವಾದಿಯವರೇ) ಅವರೊಡನೆ ಕೇಳಿರಿ: “ಅವರನ್ನು ಸೃಷ್ಟಿಸುವುದು ಕಷ್ಟವೋ? ಅಥವಾ ನಾವು ಸೃಷ್ಟಿಸಿದ ಇತರ ಸೃಷ್ಟಿಗಳನ್ನೋ?” ನಿಶ್ಚಯವಾಗಿಯೂ ನಾವು ಅವರನ್ನು ಅಂಟಿಕೊಳ್ಳುವ ಜೇಡಿಮಣ್ಣಿನಿಂದ ಸೃಷ್ಟಿಸಿದ್ದೇವೆ.

بَلۡ عَجِبۡتَ وَيَسۡخَرُونَ﴿١٢

12ಅಲ್ಲ, ನಿಮಗೆ ಅಚ್ಚರಿಯಾಗುತ್ತದೆ.[1] ಆದರೆ ಅವರು ತಮಾಷೆ ಮಾಡುತ್ತಾರೆ!

وَإِذَا ذُكِّرُواْ لَا يَذۡكُرُونَ﴿١٣

13ಅವರಿಗೆ ಉಪದೇಶ ನೀಡಲಾದರೆ ಅವರು ಅದನ್ನು ಸ್ವೀಕರಿಸುವುದಿಲ್ಲ.

وَإِذَا رَأَوۡاْ ءَايَةٗ يَسۡتَسۡخِرُونَ﴿١٤

14ಅವರು ಯಾವುದಾದರೂ ದೃಷ್ಟಾಂತವನ್ನು ಕಂಡರೆ ಲೇವಡಿ ಮಾಡುತ್ತಾರೆ.

وَقَالُوٓاْ إِنۡ هَٰذَآ إِلَّا سِحۡرٞ مُّبِينٌ﴿١٥

15ಅವರು ಹೇಳುತ್ತಾರೆ: “ಇದು ಸ್ಪಷ್ಟ ಮಾಟಗಾರಿಕೆಯಲ್ಲದೆ ಇನ್ನೇನಲ್ಲ.

أَءِذَا مِتۡنَا وَكُنَّا تُرَابٗا وَعِظَٰمًا أَءِنَّا لَمَبۡعُوثُونَ﴿١٦

16ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕ ನಮ್ಮನ್ನು ಪುನಃ ಜೀವ ನೀಡಿ ಎಬ್ಬಿಸಲಾಗುವುದೇ?

أَوَءَابَآؤُنَا ٱلۡأَوَّلُونَ﴿١٧

17ಮತ್ತು ನಮ್ಮ ಪೂರ್ವಜರನ್ನು ಕೂಡ?”

قُلۡ نَعَمۡ وَأَنتُمۡ دَٰخِرُونَ﴿١٨

18ಹೇಳಿರಿ: “ಹೌದು! ನೀವು ಅವಮಾನಿತರಾಗುವಿರಿ.”

فَإِنَّمَا هِيَ زَجۡرَةٞ وَٰحِدَةٞ فَإِذَا هُمۡ يَنظُرُونَ﴿١٩

19ಅದು ಒಂದು ತೀಕ್ಷ್ಣ ಗದರಿಕೆ ಮಾತ್ರವಾಗಿರುವುದು. ಆಗ ಅಗೋ! ಅವರು ನೋಡ ತೊಡಗುವರು.

وَقَالُواْ يَٰوَيۡلَنَا هَٰذَا يَوۡمُ ٱلدِّينِ﴿٢٠

20ಅವರು ಹೇಳುವರು: “ಅಯ್ಯೋ! ನಮ್ಮ ದುರ್ಗತಿಯೇ! ಇದು ಪ್ರತಿಫಲದ ದಿನ!”

هَٰذَا يَوۡمُ ٱلۡفَصۡلِ ٱلَّذِي كُنتُم بِهِۦ تُكَذِّبُونَ﴿٢١

21ಇದು ನೀವು ನಿಷೇಧಿಸುತ್ತಿದ್ದ ಅಂತಿಮ ತೀರ್ಪು ನೀಡುವ ದಿನವಾಗಿದೆ.

۞ ٱحۡشُرُواْ ٱلَّذِينَ ظَلَمُواْ وَأَزۡوَٰجَهُمۡ وَمَا كَانُواْ يَعۡبُدُونَ﴿٢٢

22(ಅಲ್ಲಾಹು ಆದೇಶಿಸುವನು): “ಅಕ್ರಮವೆಸಗಿದವರನ್ನು, ಅವರ ಸಹಚರರನ್ನು ಮತ್ತು ಅವರು ಆರಾಧಿಸುತ್ತಿದ್ದವುಗಳನ್ನು ಒಟ್ಟುಗೂಡಿಸಿರಿ.

مِن دُونِ ٱللَّهِ فَٱهۡدُوهُمۡ إِلَىٰ صِرَٰطِ ٱلۡجَحِيمِ﴿٢٣

23ಅಲ್ಲಾಹನನ್ನು ಬಿಟ್ಟು (ಆರಾಧಿಸುತ್ತಿದ್ದವುಗಳನ್ನು). ಅವರೆಲ್ಲರಿಗೂ ನರಕದ ದಾರಿಯನ್ನು ತೋರಿಸಿ.

وَقِفُوهُمۡۖ إِنَّهُم مَّسۡـُٔولُونَ﴿٢٤

24ಅವರನ್ನು ನಿಲ್ಲಿಸಿ! ಅವರೊಡನೆ ಪ್ರಶ್ನಿಸಬೇಕಾಗಿದೆ.”

مَا لَكُمۡ لَا تَنَاصَرُونَ﴿٢٥

25(ಅವರೊಡನೆ ಕೇಳಲಾಗುವುದು): “ನಿಮಗೇನಾಗಿದೆ? ನೀವೇಕೆ ಪರಸ್ಪರ ಸಹಾಯ ಮಾಡುವುದಿಲ್ಲ?”

بَلۡ هُمُ ٱلۡيَوۡمَ مُسۡتَسۡلِمُونَ﴿٢٦

26ಅಲ್ಲ, ವಾಸ್ತವವಾಗಿ ಇಂದು ಅವರು (ಸಂಪೂರ್ಣ) ಶರಣಾಗಿದ್ದಾರೆ.

وَأَقۡبَلَ بَعۡضُهُمۡ عَلَىٰ بَعۡضٖ يَتَسَآءَلُونَ﴿٢٧

27ಅವರಲ್ಲಿ ಒಬ್ಬರು ಇನ್ನೊಬ್ಬರ ಕಡೆಗೆ ತಿರುಗಿ ಪ್ರಶ್ನಿಸುವರು.

قَالُوٓاْ إِنَّكُمۡ كُنتُمۡ تَأۡتُونَنَا عَنِ ٱلۡيَمِينِ﴿٢٨

28ಅವರು ಹೇಳುವರು: “ನಿಶ್ಚಯವಾಗಿಯೂ ನೀವು ನಮ್ಮ ಬಲಭಾಗದಿಂದ ನಮ್ಮ ಬಳಿಗೆ ಬರುತ್ತಿದ್ದಿರಿ.”

قَالُواْ بَل لَّمۡ تَكُونُواْ مُؤۡمِنِينَ﴿٢٩

29ಅವರು ಉತ್ತರಿಸುವರು: “ಅಲ್ಲ, ನೀವು ಸತ್ಯವಿಶ್ವಾಸಿಗಳಾಗಿರಲಿಲ್ಲ.

وَمَا كَانَ لَنَا عَلَيۡكُم مِّن سُلۡطَٰنِۭۖ بَلۡ كُنتُمۡ قَوۡمٗا طَٰغِينَ﴿٣٠

30ನಮಗೆ ನಿಮ್ಮ ಮೇಲೆ ಯಾವುದೇ ಅಧಿಕಾರವಿರಲಿಲ್ಲ. ಬದಲಿಗೆ, ನೀವು ಅತಿರೇಕಿಗಳಾದ ಜನರಾಗಿದ್ದಿರಿ.

فَحَقَّ عَلَيۡنَا قَوۡلُ رَبِّنَآۖ إِنَّا لَذَآئِقُونَ﴿٣١

31ಆದ್ದರಿಂದ ನಮ್ಮ ಪರಿಪಾಲಕನ (ಅಲ್ಲಾಹನ) ವಚನವು ನಮ್ಮ ಮೇಲೆ ಖಾತ್ರಿಯಾಯಿತು. ನಿಶ್ಚಯವಾಗಿಯೂ ನಾವು ಶಿಕ್ಷೆಯ ರುಚಿಯನ್ನು ನೋಡುವೆವು.

فَأَغۡوَيۡنَٰكُمۡ إِنَّا كُنَّا غَٰوِينَ﴿٣٢

32ನಾವು ನಿಮ್ಮನ್ನು ದಾರಿತಪ್ಪಿಸಿದೆವು. (ಏಕೆಂದರೆ) ನಾವು ಸ್ವತಃ ದಾರಿತಪ್ಪಿದ್ದೆವು.”

فَإِنَّهُمۡ يَوۡمَئِذٖ فِي ٱلۡعَذَابِ مُشۡتَرِكُونَ﴿٣٣

33ಆದ್ದರಿಂದ ಆ ದಿನದಂದು ಅವರೆಲ್ಲರೂ ಶಿಕ್ಷೆಯಲ್ಲಿ ಪಾಲುದಾರರಾಗುವರು.

إِنَّا كَذَٰلِكَ نَفۡعَلُ بِٱلۡمُجۡرِمِينَ﴿٣٤

34ನಿಶ್ಚಯವಾಗಿಯೂ ನಾವು ಅಪರಾಧಿಗಳೊಡನೆ ಹೀಗೆಯೇ ವರ್ತಿಸುವೆವು.

إِنَّهُمۡ كَانُوٓاْ إِذَا قِيلَ لَهُمۡ لَآ إِلَٰهَ إِلَّا ٱللَّهُ يَسۡتَكۡبِرُونَ﴿٣٥

35ಅವರೊಡನೆ, “ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ” ಎಂದು ಹೇಳಲಾದರೆ ಅವರು ಅಹಂಕಾರ ತೋರುತ್ತಿದ್ದರು.

وَيَقُولُونَ أَئِنَّا لَتَارِكُوٓاْ ءَالِهَتِنَا لِشَاعِرٖ مَّجۡنُونِۭ﴿٣٦

36ಅವರು ಹೇಳುತ್ತಿದ್ದರು: “ಒಬ್ಬ ಮಾನಸಿಕ ಅಸ್ವಸ್ಥ ಕವಿಯ ಮಾತು ಕೇಳಿ ನಾವು ನಮ್ಮ ದೇವರುಗಳನ್ನು ಬಿಟ್ಟುಬಿಡಬೇಕೇ?”

بَلۡ جَآءَ بِٱلۡحَقِّ وَصَدَّقَ ٱلۡمُرۡسَلِينَ﴿٣٧

37ಅಲ್ಲ, ವಾಸ್ತವವಾಗಿ ಅವರು (ಪ್ರವಾದಿ) ಸತ್ಯದೊಂದಿಗೆ ಬಂದಿದ್ದರು ಮತ್ತು ಅವರು (ಮೊದಲಿನ) ಪ್ರವಾದಿಗಳನ್ನು ದೃಢೀಕರಿಸಿದ್ದರು.

إِنَّكُمۡ لَذَآئِقُواْ ٱلۡعَذَابِ ٱلۡأَلِيمِ﴿٣٨

38ನಿಶ್ಚಯವಾಗಿಯೂ ನೀವು ಯಾತನಾಮಯ ಶಿಕ್ಷೆಯ ರುಚಿಯನ್ನು ನೋಡುವಿರಿ.

وَمَا تُجۡزَوۡنَ إِلَّا مَا كُنتُمۡ تَعۡمَلُونَ﴿٣٩

39ನೀವು ಮಾಡಿದ ಕರ್ಮಗಳ ಪ್ರತಿಫಲವನ್ನೇ ಹೊರತು ಬೇರೇನೂ ನಿಮಗೆ ನೀಡಲಾಗುವುದಿಲ್ಲ.

إِلَّا عِبَادَ ٱللَّهِ ٱلۡمُخۡلَصِينَ﴿٤٠

40ಆದರೆ, ಅಲ್ಲಾಹನ ನಿಷ್ಕಳಂಕ ದಾಸರು ಇದರಿಂದ ಹೊರತಾಗಿದ್ದಾರೆ.

أُوْلَٰٓئِكَ لَهُمۡ رِزۡقٞ مَّعۡلُومٞ﴿٤١

41ಅವರಿಗೆ ನಿಶ್ಚಿತ ಉಪಜೀವನವಿದೆ.

فَوَٰكِهُ وَهُم مُّكۡرَمُونَ﴿٤٢

42ಹಣ್ಣು-ಹಂಪಲುಗಳಿವೆ! ಅವರನ್ನು ಅಲ್ಲಿ ಗೌರವಿಸಲಾಗುವುದು.

فِي جَنَّٰتِ ٱلنَّعِيمِ﴿٤٣

43ಸುಖಸಮೃದ್ಧವಾದ ಸ್ವರ್ಗೋದ್ಯಾನಗಳಲ್ಲಿ.

عَلَىٰ سُرُرٖ مُّتَقَٰبِلِينَ﴿٤٤

44ಅವರು ಪರಸ್ಪರ ಎದುರು-ಬದುರಾಗಿ ಮಂಚಗಳಲ್ಲಿ ಕುಳಿತಿರುವರು.

يُطَافُ عَلَيۡهِم بِكَأۡسٖ مِّن مَّعِينِۭ﴿٤٥

45ಹರಿಯುವ ಚಿಲುಮೆಯ ನೀರು ತುಂಬಿದ ಲೋಟಗಳನ್ನು ಅವರ ಸುತ್ತಲೂ ತರಲಾಗುವುದು.

بَيۡضَآءَ لَذَّةٖ لِّلشَّٰرِبِينَ﴿٤٦

46ಅದು ಬೆಳ್ಳಗಿದ್ದು ಕುಡಿಯುವವರಿಗೆ ಆಹ್ಲಾದಕರವಾಗಿರುವುದು.

لَا فِيهَا غَوۡلٞ وَلَا هُمۡ عَنۡهَا يُنزَفُونَ﴿٤٧

47ಅದರಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲ. ಅದರಿಂದ ನಶೆಯೂ ಉಂಟಾಗುವುದಿಲ್ಲ.

وَعِندَهُمۡ قَٰصِرَٰتُ ٱلطَّرۡفِ عِينٞ﴿٤٨

48ದೃಷ್ಟಿಯನ್ನು ನಿಯಂತ್ರಿಸುವ[1] ಮತ್ತು ಅರಳಿದ ನೇತ್ರಗಳುಳ್ಳ ಅಪ್ಸರೆಯರು ಅವರ ಬಳಿಯಿರುವರು.

كَأَنَّهُنَّ بَيۡضٞ مَّكۡنُونٞ﴿٤٩

49ಅವರು ಜೋಪಾನವಾಗಿಡಲಾದ ಮೊಟ್ಟೆಗಳಂತೆ ಇರುವರು.

فَأَقۡبَلَ بَعۡضُهُمۡ عَلَىٰ بَعۡضٖ يَتَسَآءَلُونَ﴿٥٠

50ಅವರು ಪರಸ್ಪರ ಒಬ್ಬರು ಇನ್ನೊಬ್ಬರ ಕಡೆಗೆ ತಿರುಗಿ ಪ್ರಶ್ನಿಸುವರು.

قَالَ قَآئِلٞ مِّنۡهُمۡ إِنِّي كَانَ لِي قَرِينٞ﴿٥١

51ಅವರಲ್ಲಿ ಒಬ್ಬನು ಹೇಳುವನು: “ನಿಜಕ್ಕೂ ನನಗೊಬ್ಬ ಗೆಳೆಯನಿದ್ದನು.

يَقُولُ أَءِنَّكَ لَمِنَ ٱلۡمُصَدِّقِينَ﴿٥٢

52ಅವನು ಕೇಳುತ್ತಿದ್ದನು: ನೀನು (ಪರಲೋಕದಲ್ಲಿ) ವಿಶ್ವಾಸವಿಡುತ್ತೀಯಾ?

أَءِذَا مِتۡنَا وَكُنَّا تُرَابٗا وَعِظَٰمًا أَءِنَّا لَمَدِينُونَ﴿٥٣

53ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕವೂ ನಮಗೆ ನಮ್ಮ ಕರ್ಮಫಲಗಳನ್ನು ನೀಡಲಾಗುತ್ತದೆಯೇ?”

قَالَ هَلۡ أَنتُم مُّطَّلِعُونَ﴿٥٤

54ಅವನು (ಅವನು ತನ್ನ ಬಳಿಯಿರುವವರೊಡನೆ) ಕೇಳುವನು: “ನೀವು ಅವನನ್ನು ನೋಡಲು ಬಯಸುತ್ತೀರಾ?”

فَٱطَّلَعَ فَرَءَاهُ فِي سَوَآءِ ٱلۡجَحِيمِ﴿٥٥

55ಆಗ ಅವನು ಇಣುಕಿ ನೋಡಿದಾಗ ಆತ ನರಕದ ಮಧ್ಯಭಾಗದಲ್ಲಿರುವುದನ್ನು ಕಾಣುವನು.

قَالَ تَٱللَّهِ إِن كِدتَّ لَتُرۡدِينِ﴿٥٦

56ಅವನು ಹೇಳುವನು: “ಅಲ್ಲಾಹನಾಣೆ! ನೀನು ನನ್ನನ್ನು ಇನ್ನೇನು ನಾಶ ಮಾಡಿಯೇ ಬಿಡುತ್ತಿದ್ದೆ.

وَلَوۡلَا نِعۡمَةُ رَبِّي لَكُنتُ مِنَ ٱلۡمُحۡضَرِينَ﴿٥٧

57ನನ್ನ ಪರಿಪಾಲಕನ (ಅಲ್ಲಾಹನ) ಅನುಗ್ರಹವಿಲ್ಲದಿರುತ್ತಿದ್ದರೆ, ನಾನು ಕೂಡ (ನರಕಕ್ಕೆ) ಹಾಜರುಪಡಿಸಲಾಗುವವರಲ್ಲಿ ಸೇರಿರುತ್ತಿದ್ದೆ.”

أَفَمَا نَحۡنُ بِمَيِّتِينَ﴿٥٨

58(ಸ್ವರ್ಗವಾಸಿಗಳು ಹೇಳುವರು): “ಇನ್ನು ನಾವು ಸಾಯುವುದಿಲ್ಲ.

إِلَّا مَوۡتَتَنَا ٱلۡأُولَىٰ وَمَا نَحۡنُ بِمُعَذَّبِينَ﴿٥٩

59ನಮ್ಮ ಮೊದಲ ಸಾವಿನ ಹೊರತು. ಇನ್ನು ನಮಗೆ ಶಿಕ್ಷೆಯೂ ಇಲ್ಲ.”

إِنَّ هَٰذَا لَهُوَ ٱلۡفَوۡزُ ٱلۡعَظِيمُ﴿٦٠

60ನಿಶ್ಚಯವಾಗಿಯೂ ಇದೇ ಮಹಾ ವಿಜಯ.

لِمِثۡلِ هَٰذَا فَلۡيَعۡمَلِ ٱلۡعَٰمِلُونَ﴿٦١

61ಕರ್ಮವೆಸಗುವವರು ಇಂತಹ (ವಿಜಯಕ್ಕಾಗಿಯೇ) ಕರ್ಮವೆಸಗಲಿ.

أَذَٰلِكَ خَيۡرٞ نُّزُلًا أَمۡ شَجَرَةُ ٱلزَّقُّومِ﴿٦٢

62ಈ ಆತಿಥ್ಯವು ಉತ್ತಮವೋ? ಅಥವಾ ಝಕ್ಕೂಮ್ ಮರವೋ?[1]

إِنَّا جَعَلۡنَٰهَا فِتۡنَةٗ لِّلظَّٰلِمِينَ﴿٦٣

63ನಿಶ್ಚಯವಾಗಿಯೂ ನಾವು ಅದನ್ನು ಅಕ್ರಮಿಗಳಿಗೆ ಪರೀಕ್ಷೆಯಾಗಿ ಮಾಡಿದ್ದೇವೆ.

إِنَّهَا شَجَرَةٞ تَخۡرُجُ فِيٓ أَصۡلِ ٱلۡجَحِيمِ﴿٦٤

64ಅದು ನರಕಾಗ್ನಿಯ ತಳಭಾಗದಿಂದ ಹೊರಹೊಮ್ಮುವ ಮರವಾಗಿದೆ.

طَلۡعُهَا كَأَنَّهُۥ رُءُوسُ ٱلشَّيَٰطِينِ﴿٦٥

65ಅದರ ಮೊಗ್ಗುಗಳು ಶೈತಾನರ ತಲೆ ಬುರುಡೆಗಳಂತಿವೆ.

فَإِنَّهُمۡ لَأٓكِلُونَ مِنۡهَا فَمَالِـُٔونَ مِنۡهَا ٱلۡبُطُونَ﴿٦٦

66ನಿಶ್ಚಯವಾಗಿಯೂ ಅವರು ಅದರಿಂದ ತಿನ್ನುವರು ಮತ್ತು ಹೊಟ್ಟೆ ತುಂಬಿಸುವರು.

ثُمَّ إِنَّ لَهُمۡ عَلَيۡهَا لَشَوۡبٗا مِّنۡ حَمِيمٖ﴿٦٧

67ನಂತರ ಅವರಿಗೆ ಮಿಶ್ರಣಗೊಂಡ ಕುದಿಯುವ ಪಾನೀಯವನ್ನು ನೀಡಲಾಗುವುದು.

ثُمَّ إِنَّ مَرۡجِعَهُمۡ لَإِلَى ٱلۡجَحِيمِ﴿٦٨

68ನಂತರ ಅವರೆಲ್ಲರೂ ಮರಳುವುದು ನರಕದ ಕಡೆಗಾಗಿದೆ.

إِنَّهُمۡ أَلۡفَوۡاْ ءَابَآءَهُمۡ ضَآلِّينَ﴿٦٩

69ನಿಶ್ಚಯವಾಗಿಯೂ ಅವರು ತಮ್ಮ ಪೂರ್ವಜರನ್ನು ದಾರಿತಪ್ಪಿದ್ದಾಗಿ ಕಂಡಿದ್ದರು.

فَهُمۡ عَلَىٰٓ ءَاثَٰرِهِمۡ يُهۡرَعُونَ﴿٧٠

70ಇವರು ಅವರ ಹೆಜ್ಜೆಗಳನ್ನು (ಹಿಂಬಾಲಿಸಿ) ಧಾವಿಸುತ್ತಿದ್ದಾರೆ.

وَلَقَدۡ ضَلَّ قَبۡلَهُمۡ أَكۡثَرُ ٱلۡأَوَّلِينَ﴿٧١

71ಇವರಿಗಿಂತ ಮೊದಲಿನ ಜನರಲ್ಲಿ ಹೆಚ್ಚಿನವರು ದಾರಿತಪ್ಪಿದ್ದರು.

وَلَقَدۡ أَرۡسَلۡنَا فِيهِم مُّنذِرِينَ﴿٧٢

72ನಾವು ಅವರಿಗೆ ಮುನ್ನೆಚ್ಚರಿಕೆಗಾರರನ್ನು (ಪ್ರವಾದಿಗಳನ್ನು) ಕಳುಹಿಸಿದ್ದೆವು.

فَٱنظُرۡ كَيۡفَ كَانَ عَٰقِبَةُ ٱلۡمُنذَرِينَ﴿٧٣

73ಮುನ್ನೆಚ್ಚರಿಕೆ ನೀಡಲಾದವರ ಅಂತ್ಯವು ಹೇಗಿತ್ತೆಂದು ನೋಡಿರಿ.

إِلَّا عِبَادَ ٱللَّهِ ٱلۡمُخۡلَصِينَ﴿٧٤

74ಅಲ್ಲಾಹನ ನಿಷ್ಕಳಂಕ ದಾಸರು ಇದಕ್ಕೆ ಹೊರತಾಗಿದ್ದಾರೆ.

وَلَقَدۡ نَادَىٰنَا نُوحٞ فَلَنِعۡمَ ٱلۡمُجِيبُونَ﴿٧٥

75ನೂಹ್ ನಮ್ಮನ್ನು ಕರೆದು ಪ್ರಾರ್ಥಿಸಿದ್ದರು. ನಾವು ಪ್ರಾರ್ಥನೆಗೆ ಎಷ್ಟು ಚೆನ್ನಾಗಿ ಉತ್ತರಿಸುತ್ತೇವೆ.

وَنَجَّيۡنَٰهُ وَأَهۡلَهُۥ مِنَ ٱلۡكَرۡبِ ٱلۡعَظِيمِ﴿٧٦

76ನಾವು ಅವರನ್ನು ಮತ್ತು ಅವರ ಜನರನ್ನು ಮಹಾ ದುರಂತದಿಂದ ಪಾರು ಮಾಡಿದೆವು.

وَجَعَلۡنَا ذُرِّيَّتَهُۥ هُمُ ٱلۡبَاقِينَ﴿٧٧

77ನಾವು ಅವರ ಸಂತಾನವನ್ನು (ಭೂಮಿಯಲ್ಲಿ) ಅವಶೇಷಿಸಿದವರನ್ನಾಗಿ ಮಾಡಿದೆವು.

وَتَرَكۡنَا عَلَيۡهِ فِي ٱلۡأٓخِرِينَ﴿٧٨

78ನಾವು ನಂತರದ ತಲೆಮಾರುಗಳಲ್ಲಿ ಅವರ (ಉತ್ತಮ ಹೆಸರನ್ನು) ಉಳಿಸಿದೆವು.

سَلَٰمٌ عَلَىٰ نُوحٖ فِي ٱلۡعَٰلَمِينَ﴿٧٩

79ಸರ್ವಲೋಕದವರಲ್ಲಿ ನೂಹರ ಮೇಲೆ ಶಾಂತಿಯಿರಲಿ!

إِنَّا كَذَٰلِكَ نَجۡزِي ٱلۡمُحۡسِنِينَ﴿٨٠

80ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಹೀಗೆಯೇ ಪ್ರತಿಫಲವನ್ನು ನೀಡುವೆವು.

إِنَّهُۥ مِنۡ عِبَادِنَا ٱلۡمُؤۡمِنِينَ﴿٨١

81ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದ್ದಾರೆ.

ثُمَّ أَغۡرَقۡنَا ٱلۡأٓخَرِينَ﴿٨٢

82ನಂತರ ನಾವು ಉಳಿದವರನ್ನು ಮುಳುಗಿಸಿದೆವು.

۞ وَإِنَّ مِن شِيعَتِهِۦ لَإِبۡرَٰهِيمَ﴿٨٣

83ನಿಶ್ಚಯವಾಗಿಯೂ ಇಬ್ರಾಹೀಮ್ ಕೂಡ ಅವರ ಗುಂಪಿಗೆ ಸೇರಿದವರು.

إِذۡ جَآءَ رَبَّهُۥ بِقَلۡبٖ سَلِيمٍ﴿٨٤

84ಅವರು ಅವರ ಪರಿಪಾಲಕನ (ಅಲ್ಲಾಹನ) ಬಳಿಗೆ ಸುರಕ್ಷಿತ ಹೃದಯದೊಂದಿಗೆ ಬಂದ ಸಂದರ್ಭ!

إِذۡ قَالَ لِأَبِيهِ وَقَوۡمِهِۦ مَاذَا تَعۡبُدُونَ﴿٨٥

85ಅವರು ತಮ್ಮ ತಂದೆ ಮತ್ತು ಊರ ಜನರೊಡನೆ ಕೇಳಿದರು: “ನೀವು ಏನು ಆರಾಧಿಸುತ್ತಿದ್ದೀರಿ?

أَئِفۡكًا ءَالِهَةٗ دُونَ ٱللَّهِ تُرِيدُونَ﴿٨٦

86ನೀವು ಅಲ್ಲಾಹನನ್ನು ಬಿಟ್ಟು ಮಿಥ್ಯ ದೇವರುಗಳನ್ನು ಬಯಸುತ್ತೀರಾ?

فَمَا ظَنُّكُم بِرَبِّ ٱلۡعَٰلَمِينَ﴿٨٧

87ಸರ್ವಲೋಕಗಳ ಪರಿಪಾಲಕನ (ಅಲ್ಲಾಹನ) ಬಗ್ಗೆ ನಿಮ್ಮ ಕಲ್ಪನೆಯೇನು?”

فَنَظَرَ نَظۡرَةٗ فِي ٱلنُّجُومِ﴿٨٨

88ನಂತರ ಅವರು ನಕ್ಷತ್ರಗಳ ಕಡೆಗೆ ಒಂದು ನೋಟವನ್ನು ಬೀರಿದರು.

فَقَالَ إِنِّي سَقِيمٞ﴿٨٩

89ಅವರು ಹೇಳಿದರು: “ನಾನು ಅಸ್ವಸ್ಥನಾಗಿದ್ದೇನೆ.”

فَتَوَلَّوۡاْ عَنۡهُ مُدۡبِرِينَ﴿٩٠

90ಆಗ ಜನರು ಇಬ್ರಾಹೀಮ‌ರನ್ನು ಬಿಟ್ಟು ತಿರುಗಿ ನಡೆದರು.

فَرَاغَ إِلَىٰٓ ءَالِهَتِهِمۡ فَقَالَ أَلَا تَأۡكُلُونَ﴿٩١

91ಇಬ್ರಾಹೀಮ್ ಅವರ ದೇವರುಗಳ ಕಡೆಗೆ ತಿರುಗಿ ಕೇಳಿದರು: “ನೀವೇಕೆ ತಿನ್ನುವುದಿಲ್ಲ?

مَا لَكُمۡ لَا تَنطِقُونَ﴿٩٢

92ನಿಮಗೇನಾಗಿದೆ? ನೀವೇಕೆ ಮಾತನಾಡುವುದಿಲ್ಲ?”

فَرَاغَ عَلَيۡهِمۡ ضَرۡبَۢا بِٱلۡيَمِينِ﴿٩٣

93ನಂತರ ಅವರು ಅವುಗಳ ಕಡೆಗೆ ತಿರುಗಿ ಬಲಗೈಯಿಂದ ಬಲವಾದ ಏಟು ಕೊಟ್ಟರು.

فَأَقۡبَلُوٓاْ إِلَيۡهِ يَزِفُّونَ﴿٩٤

94ಜನರು ಅವರ ಬಳಿಗೆ ಓಡೋಡಿ ಬಂದರು.

قَالَ أَتَعۡبُدُونَ مَا تَنۡحِتُونَ﴿٩٥

95ಇಬ್ರಾಹೀಮ್ ಕೇಳಿದರು: “ನೀವೇ ಸ್ವತಃ ಕಡೆದು ನಿರ್ಮಿಸಿದ್ದನ್ನು ನೀವು ಆರಾಧಿಸುತ್ತಿದ್ದೀರಾ?

وَٱللَّهُ خَلَقَكُمۡ وَمَا تَعۡمَلُونَ﴿٩٦

96ವಾಸ್ತವವಾಗಿ, ಅಲ್ಲಾಹನೇ ನಿಮ್ಮನ್ನು ಮತ್ತು ನೀವು ನಿರ್ಮಿಸುವುದನ್ನು ಸೃಷ್ಟಿಸಿದವನು.”

قَالُواْ ٱبۡنُواْ لَهُۥ بُنۡيَٰنٗا فَأَلۡقُوهُ فِي ٱلۡجَحِيمِ﴿٩٧

97ಜನರು ಹೇಳಿದರು: “ನೀವು ಅವನಿಗೆ ಒಂದು ದೊಡ್ಡ ಅಗ್ನಿಕುಂಡವನ್ನು ನಿರ್ಮಿಸಿ, ಅವನನ್ನು ಜ್ವಲಿಸುವ ಅಗ್ನಿಗೆ ಎಸೆಯಿರಿ.”

فَأَرَادُواْ بِهِۦ كَيۡدٗا فَجَعَلۡنَٰهُمُ ٱلۡأَسۡفَلِينَ﴿٩٨

98ಅವರು ಇಬ್ರಾಹೀಮರನ್ನು ಕುತಂತ್ರದಿಂದ ನಾಶ ಮಾಡಲು ಬಯಸಿದ್ದರು. ಆದರೆ ನಾವು ಅವರನ್ನು ಅತ್ಯಂತ ಅಧಮರನ್ನಾಗಿ ಮಾಡಿದೆವು.

وَقَالَ إِنِّي ذَاهِبٌ إِلَىٰ رَبِّي سَيَهۡدِينِ﴿٩٩

99ಇಬ್ರಾಹೀಮ್ ಹೇಳಿದರು: “ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ತೆರಳುತ್ತೇನೆ. ಅವನು ನನಗೆ ದಾರಿ ತೋರಿಸುವನು.

رَبِّ هَبۡ لِي مِنَ ٱلصَّٰلِحِينَ﴿١٠٠

100ನನ್ನ ಪರಿಪಾಲಕನೇ! ನನಗೆ ನೀತಿವಂತರಲ್ಲಿ ಸೇರಿದ ಮಗುವನ್ನು ಕರುಣಿಸು.”

فَبَشَّرۡنَٰهُ بِغُلَٰمٍ حَلِيمٖ﴿١٠١

101ಆಗ ನಾವು ಅವರಿಗೆ ಸಹಿಷ್ಣುತೆಯುಳ್ಳ ಮಗು ಜನಿಸುವ ಬಗ್ಗೆ ಸುವಾರ್ತೆಯನ್ನು ತಿಳಿಸಿದೆವು.

فَلَمَّا بَلَغَ مَعَهُ ٱلسَّعۡيَ قَالَ يَٰبُنَيَّ إِنِّيٓ أَرَىٰ فِي ٱلۡمَنَامِ أَنِّيٓ أَذۡبَحُكَ فَٱنظُرۡ مَاذَا تَرَىٰۚ قَالَ يَٰٓأَبَتِ ٱفۡعَلۡ مَا تُؤۡمَرُۖ سَتَجِدُنِيٓ إِن شَآءَ ٱللَّهُ مِنَ ٱلصَّٰبِرِينَ﴿١٠٢

102ನಂತರ ಅವನು (ಮಗು) ತಂದೆಯೊಂದಿಗೆ ಓಡಾಡುವ ಪ್ರಾಯಕ್ಕೆ ತಲುಪಿದಾಗ ಅವರು (ಇಬ್ರಾಹೀಂ) ಹೇಳಿದರು: “ಮಗೂ! ನಾನು ನಿನ್ನ ಕತ್ತು ಕೊಯ್ಯುತ್ತಿರುವಂತೆ ಕನಸು ಕಾಣುತ್ತಿದ್ದೇನೆ. ನಿನ್ನ ಅಭಿಪ್ರಾಯವೇನೆಂದು ಹೇಳು?” ಮಗ ಹೇಳಿದನು: “ಅಪ್ಪಾ! ನಿಮಗೆ ಆಜ್ಞಾಪಿಸಲಾಗಿರುವುದನ್ನು ನಿರ್ವಹಿಸಿರಿ. ಅಲ್ಲಾಹು ಬಯಸಿದರೆ ನಿಶ್ಚಯವಾಗಿಯೂ ನೀವು ನನ್ನನ್ನು ತಾಳ್ಮೆ ವಹಿಸುವವರಲ್ಲಿ ಕಾಣುವಿರಿ.”

فَلَمَّآ أَسۡلَمَا وَتَلَّهُۥ لِلۡجَبِينِ﴿١٠٣

103ನಂತರ ಅವರಿಬ್ಬರೂ (ಅಲ್ಲಾಹನ ಆಜ್ಞೆಗೆ) ಶರಣಾಗಿ, ಅವರು ಮಗನನ್ನು ಹಣೆಯ ಮೇಲೆ ಮಲಗಿಸಿದಾಗ.

وَنَٰدَيۡنَٰهُ أَن يَٰٓإِبۡرَٰهِيمُ﴿١٠٤

104ನಾವು ಅವರನ್ನು ಕರೆದು ಹೇಳಿದೆವು: “ಓ ಇಬ್ರಾಹೀಮ್!

قَدۡ صَدَّقۡتَ ٱلرُّءۡيَآۚ إِنَّا كَذَٰلِكَ نَجۡزِي ٱلۡمُحۡسِنِينَ﴿١٠٥

105ನಿಶ್ಚಯವಾಗಿಯೂ ನೀವು ಕನಸನ್ನು ನಿಜಪಡಿಸಿದ್ದೀರಿ.” ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ.

إِنَّ هَٰذَا لَهُوَ ٱلۡبَلَٰٓؤُاْ ٱلۡمُبِينُ﴿١٠٦

106ನಿಶ್ಚಯವಾಗಿಯೂ ಇದು ಸ್ಪಷ್ಟ ಪರೀಕ್ಷೆಯಾಗಿತ್ತು.

وَفَدَيۡنَٰهُ بِذِبۡحٍ عَظِيمٖ﴿١٠٧

107ನಾವು ಅವರ (ಮಗನ) ಬದಲಿಗೆ ಬಲಿ ನೀಡಲು ಒಂದು ಮಹಾ ಬಲಿಮೃಗವನ್ನು ನೀಡಿದೆವು.

وَتَرَكۡنَا عَلَيۡهِ فِي ٱلۡأٓخِرِينَ﴿١٠٨

108ನಾವು ಅವರ (ಇಬ್ರಾಹೀಮ‌ರ) ಕೀರ್ತಿಯನ್ನು ಅವರ ನಂತರದವರಲ್ಲಿ ಉಳಿಸಿದೆವು.

سَلَٰمٌ عَلَىٰٓ إِبۡرَٰهِيمَ﴿١٠٩

109ಇಬ್ರಾಹೀಮ‌ರ ಮೇಲೆ ಶಾಂತಿಯಿರಲಿ!

كَذَٰلِكَ نَجۡزِي ٱلۡمُحۡسِنِينَ﴿١١٠

110ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ.

إِنَّهُۥ مِنۡ عِبَادِنَا ٱلۡمُؤۡمِنِينَ﴿١١١

111ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿದ್ದರು.

وَبَشَّرۡنَٰهُ بِإِسۡحَٰقَ نَبِيّٗا مِّنَ ٱلصَّٰلِحِينَ﴿١١٢

112ನಾವು ಅವರಿಗೆ ಇಸ್‍ಹಾಕರ ಜನನದ ಬಗ್ಗೆ ಸುವಾರ್ತೆಯನ್ನು ತಿಳಿಸಿದೆವು. ಅವರು ಸಜ್ಜನರಲ್ಲಿ ಸೇರಿದ ಒಬ್ಬ ಪ್ರವಾದಿಯಾಗಿದ್ದರು.

وَبَٰرَكۡنَا عَلَيۡهِ وَعَلَىٰٓ إِسۡحَٰقَۚ وَمِن ذُرِّيَّتِهِمَا مُحۡسِنٞ وَظَالِمٞ لِّنَفۡسِهِۦ مُبِينٞ﴿١١٣

113ನಾವು ಅವರಿಗೆ ಮತ್ತು ಇಸ್‍ಹಾಕರಿಗೆ ಸಮೃದ್ಧಿಯನ್ನು ದಯಪಾಲಿಸಿದೆವು. ಅವರಿಬ್ಬರ ಸಂತಾನದಲ್ಲಿ ಒಳಿತು ಮಾಡುವವರಿದ್ದಾರೆ. ಸ್ವತಃ ಅವರೊಡನೆಯೇ ಸ್ಪಷ್ಟವಾಗಿ ಅಕ್ರಮವೆಸಗುವವರೂ ಇದ್ದಾರೆ.

وَلَقَدۡ مَنَنَّا عَلَىٰ مُوسَىٰ وَهَٰرُونَ﴿١١٤

114ನಿಶ್ಚಯವಾಗಿಯೂ ನಾವು ಮೂಸಾ ಮತ್ತು ಹಾರೂನರಿಗೆ ಉಪಕಾರ ಮಾಡಿದ್ದೆವು.

وَنَجَّيۡنَٰهُمَا وَقَوۡمَهُمَا مِنَ ٱلۡكَرۡبِ ٱلۡعَظِيمِ﴿١١٥

115ನಾವು ಅವರನ್ನು ಮತ್ತು ಅವರ ಜನರನ್ನು ಮಹಾ ದುರಂತದಿಂದ ರಕ್ಷಿಸಿದೆವು.

وَنَصَرۡنَٰهُمۡ فَكَانُواْ هُمُ ٱلۡغَٰلِبِينَ﴿١١٦

116ನಾವು ಅವರಿಗೆ ಸಹಾಯ ಮಾಡಿದೆವು. ಆಗ ಅವರೇ ವಿಜಯಿಗಳಾದರು.

وَءَاتَيۡنَٰهُمَا ٱلۡكِتَٰبَ ٱلۡمُسۡتَبِينَ﴿١١٧

117ನಾವು ಅವರಿಗೆ (ವಿಷಯಗಳನ್ನು) ಸ್ಪಷ್ಟಪಡಿಸುವ ಗ್ರಂಥವನ್ನು ನೀಡಿದೆವು.

وَهَدَيۡنَٰهُمَا ٱلصِّرَٰطَ ٱلۡمُسۡتَقِيمَ﴿١١٨

118ನಾವು ಅವರನ್ನು ನೇರ ಮಾರ್ಗದಲ್ಲಿ ದೃಢವಾಗಿ ನಿಲ್ಲಿಸಿದೆವು.

وَتَرَكۡنَا عَلَيۡهِمَا فِي ٱلۡأٓخِرِينَ﴿١١٩

119ನಾವು ಅವರ ಕೀರ್ತಿಯನ್ನು ನಂತರದ ತಲೆಮಾರುಗಳಲ್ಲಿ ಉಳಿಸಿದೆವು.

سَلَٰمٌ عَلَىٰ مُوسَىٰ وَهَٰرُونَ﴿١٢٠

120ಮೂಸಾ ಮತ್ತು ಹಾರೂನರ ಮೇಲೆ ಶಾಂತಿಯಿರಲಿ!

إِنَّا كَذَٰلِكَ نَجۡزِي ٱلۡمُحۡسِنِينَ﴿١٢١

121ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ.

إِنَّهُمَا مِنۡ عِبَادِنَا ٱلۡمُؤۡمِنِينَ﴿١٢٢

122ನಿಶ್ಚಯವಾಗಿಯೂ ಅವರಿಬ್ಬರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿದ್ದರು.

وَإِنَّ إِلۡيَاسَ لَمِنَ ٱلۡمُرۡسَلِينَ﴿١٢٣

123ನಿಶ್ಚಯವಾಗಿಯೂ ಇಲ್ಯಾಸ್ ಪ್ರವಾದಿಗಳಲ್ಲಿ ಒಬ್ಬರಾಗಿದ್ದರು.

إِذۡ قَالَ لِقَوۡمِهِۦٓ أَلَا تَتَّقُونَ﴿١٢٤

124ಅವರು ತಮ್ಮ ಜನರೊಡನೆ ಹೇಳಿದ ಸಂದರ್ಭ: “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?”

أَتَدۡعُونَ بَعۡلٗا وَتَذَرُونَ أَحۡسَنَ ٱلۡخَٰلِقِينَ﴿١٢٥

125ನೀವು ಬಾಲ್ (ವಿಗ್ರಹವನ್ನು) ಕರೆದು ಪ್ರಾರ್ಥಿಸುತ್ತೀರಾ? ಮತ್ತು ಅತ್ಯುತ್ತಮ ಸೃಷ್ಟಿಕರ್ತನನ್ನು ತೊರೆಯುತ್ತೀರಾ?

ٱللَّهَ رَبَّكُمۡ وَرَبَّ ءَابَآئِكُمُ ٱلۡأَوَّلِينَ﴿١٢٦

126ಅಂದರೆ ನಿಮ್ಮ ಮತ್ತು ನಿಮ್ಮ ಪೂರ್ವಜರ ಪರಿಪಾಲಕನಾದ ಅಲ್ಲಾಹನನ್ನು?

فَكَذَّبُوهُ فَإِنَّهُمۡ لَمُحۡضَرُونَ﴿١٢٧

127ಆದರೆ ಅವರು ಅವರನ್ನು ನಿಷೇಧಿಸಿದರು. ನಿಶ್ಚಯವಾಗಿಯೂ ಅವರನ್ನು (ಶಿಕ್ಷೆಗೆ) ಹಾಜರುಪಡಿಸಲಾಗುವುದು.

إِلَّا عِبَادَ ٱللَّهِ ٱلۡمُخۡلَصِينَ﴿١٢٨

128ಅಲ್ಲಾಹನ ನಿಷ್ಕಳಂಕ ದಾಸರು ಇದಕ್ಕೆ ಹೊರತಾಗಿದ್ದಾರೆ.

وَتَرَكۡنَا عَلَيۡهِ فِي ٱلۡأٓخِرِينَ﴿١٢٩

129ನಂತರದ ತಲೆಮಾರುಗಳಲ್ಲಿ ನಾವು ಅವರ ಕೀರ್ತಿಯನ್ನು ಉಳಿಸಿದೆವು.

سَلَٰمٌ عَلَىٰٓ إِلۡ يَاسِينَ﴿١٣٠

130ಇಲ್ಯಾಸರ ಮೇಲೆ ಶಾಂತಿಯಿರಲಿ!

إِنَّا كَذَٰلِكَ نَجۡزِي ٱلۡمُحۡسِنِينَ﴿١٣١

131ನಿಶ್ಚಯವಾಗಿಯೂ ನಾವು ನೀತಿವಂತರಿಗೆ ಈ ರೀತಿ ಪ್ರತಿಫಲವನ್ನು ನೀಡುತ್ತೇವೆ.

إِنَّهُۥ مِنۡ عِبَادِنَا ٱلۡمُؤۡمِنِينَ﴿١٣٢

132ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದವರಾಗಿದ್ದರು.

وَإِنَّ لُوطٗا لَّمِنَ ٱلۡمُرۡسَلِينَ﴿١٣٣

133ನಿಶ್ಚಯವಾಗಿಯೂ ಲೂತ್ ಸಂದೇಶವಾಹಕರಲ್ಲಿ ಸೇರಿದವರಾಗಿದ್ದರು.

إِذۡ نَجَّيۡنَٰهُ وَأَهۡلَهُۥٓ أَجۡمَعِينَ﴿١٣٤

134ನಾವು ಅವರನ್ನು ಮತ್ತು ಅವರ ಕುಟುಂಬವನ್ನು ಸಂಪೂರ್ಣವಾಗಿ ರಕ್ಷಿಸಿದ ಸಂದರ್ಭ!

إِلَّا عَجُوزٗا فِي ٱلۡغَٰبِرِينَ﴿١٣٥

135ಹಿಂದೆ ಉಳಿದವರಲ್ಲಿ ಸೇರಿದ ಒಬ್ಬ ವೃದ್ಧೆಯ ಹೊರತು.

ثُمَّ دَمَّرۡنَا ٱلۡأٓخَرِينَ﴿١٣٦

136ನಂತರ ಇತರರನ್ನು ನಾವು ನಾಶ ಮಾಡಿದೆವು.

وَإِنَّكُمۡ لَتَمُرُّونَ عَلَيۡهِم مُّصۡبِحِينَ﴿١٣٧

137ನೀವು ಬೆಳಗಾಗುವಾಗ ಅವರ ಊರುಗಳ ಬಳಿಯಿಂದ ಸಾಗುತ್ತೀರಿ.

وَبِٱلَّيۡلِۚ أَفَلَا تَعۡقِلُونَ﴿١٣٨

138ರಾತ್ರಿ ಕೂಡ. ಆದರೂ ನೀವು ಆಲೋಚಿಸುವುದಿಲ್ಲವೇ?

وَإِنَّ يُونُسَ لَمِنَ ٱلۡمُرۡسَلِينَ﴿١٣٩

139ನಿಶ್ಚಯವಾಗಿಯೂ ಯೂನುಸ್ ಸಂದೇಶವಾಹಕರಲ್ಲಿ ಸೇರಿದವರಾಗಿದ್ದರು.

إِذۡ أَبَقَ إِلَى ٱلۡفُلۡكِ ٱلۡمَشۡحُونِ﴿١٤٠

140ಅವರು ತುಂಬಿ ತುಳುಕುವ ನಾವೆಯ ಬಳಿಗೆ ಪಲಾಯನ ಮಾಡಿದ ಸಂದರ್ಭ!

فَسَاهَمَ فَكَانَ مِنَ ٱلۡمُدۡحَضِينَ﴿١٤١

141ನಂತರ ಅಲ್ಲಿ ಚೀಟಿಯೆತ್ತಲಾದಾಗ ಅವರು ಪರಾಜಿತರಾದರು.

فَٱلۡتَقَمَهُ ٱلۡحُوتُ وَهُوَ مُلِيمٞ﴿١٤٢

142ನಂತರ ಅವರು ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದಾಗ ಮೀನು ಅವರನ್ನು ನುಂಗಿತು.

فَلَوۡلَآ أَنَّهُۥ كَانَ مِنَ ٱلۡمُسَبِّحِينَ﴿١٤٣

143ಆದರೆ ಅವರು ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುವವರಲ್ಲಿ ಸೇರದಿರುತ್ತಿದ್ದರೆ

لَلَبِثَ فِي بَطۡنِهِۦٓ إِلَىٰ يَوۡمِ يُبۡعَثُونَ﴿١٤٤

144ಜನರಿಗೆ ಜೀವ ನೀಡಿ ಎಬ್ಬಿಸಲಾಗುವ ದಿನದವರೆಗೂ ಅವರು ಅದರ ಹೊಟ್ಟೆಯಲ್ಲೇ ಉಳಿಯುತ್ತಿದ್ದರು!

۞ فَنَبَذۡنَٰهُ بِٱلۡعَرَآءِ وَهُوَ سَقِيمٞ﴿١٤٥

145ನಂತರ ನಾವು ಅವರನ್ನು ಬಯಲು ಪ್ರದೇಶಕ್ಕೆ ಎಸೆದೆವು. ಆಗ ಅವರು ಅಸ್ವಸ್ಥರಾಗಿದ್ದರು.

وَأَنۢبَتۡنَا عَلَيۡهِ شَجَرَةٗ مِّن يَقۡطِينٖ﴿١٤٦

146ನಾವು ಅವರಿಗೆ (ನೆರಳು ನೀಡುವ) ಸೋರೆ ಬಳ್ಳಿಯ ಮರವನ್ನು ಬೆಳೆಸಿದೆವು.

وَأَرۡسَلۡنَٰهُ إِلَىٰ مِاْئَةِ أَلۡفٍ أَوۡ يَزِيدُونَ﴿١٤٧

147ನಾವು ಅವರನ್ನು ಒಂದು ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚಿನ ಜನರ ಬಳಿಗೆ ಕಳುಹಿಸಿದೆವು.

فَـَٔامَنُواْ فَمَتَّعۡنَٰهُمۡ إِلَىٰ حِينٖ﴿١٤٨

148ಅವರು (ಆ ಜನರು) ವಿಶ್ವಾಸವಿಟ್ಟರು. ಆದ್ದರಿಂದ ನಾವು ಅವರಿಗೆ ಒಂದು ಕಾಲದವರೆಗೆ ಸುಖ ಜೀವನವನ್ನು ಒದಗಿಸಿದೆವು.

فَٱسۡتَفۡتِهِمۡ أَلِرَبِّكَ ٱلۡبَنَاتُ وَلَهُمُ ٱلۡبَنُونَ﴿١٤٩

149(ಓ ಪ್ರವಾದಿಯವರೇ!) ಅವರೊಂದಿಗೆ ಕೇಳಿರಿ: “ನಿಮ್ಮ ಪರಿಪಾಲಕನಿಗೆ ಹೆಣ್ಣು ಮಕ್ಕಳು ಮತ್ತು ಅವರಿಗೆ ಗಂಡುಮಕ್ಕಳೇ?

أَمۡ خَلَقۡنَا ٱلۡمَلَٰٓئِكَةَ إِنَٰثٗا وَهُمۡ شَٰهِدُونَ﴿١٥٠

150ಅಥವಾ ನಾವು ದೇವದೂತರು‍ಗಳನ್ನು ಸ್ತ್ರೀಯರನ್ನಾಗಿ ಸೃಷ್ಟಿಸುವಾಗ ಅವರು ಅಲ್ಲಿ ಉಪಸ್ಥಿತರಿದ್ದರೇ?”

أَلَآ إِنَّهُم مِّنۡ إِفۡكِهِمۡ لَيَقُولُونَ﴿١٥١

151ತಿಳಿಯಿರಿ! ಅವರು ಕೇವಲ ಸುಳ್ಳನ್ನು ಕಲ್ಪಿಸಿ ಹೇಳುತ್ತಿದ್ದಾರೆ.

وَلَدَ ٱللَّهُ وَإِنَّهُمۡ لَكَٰذِبُونَ﴿١٥٢

152ಅಲ್ಲಾಹನಿಗೆ ಮಕ್ಕಳಿದ್ದಾರೆಂದು. ನಿಶ್ಚಯವಾಗಿಯೂ ಅವರು ಸುಳ್ಳು ಹೇಳುವವರಾಗಿದ್ದಾರೆ.

أَصۡطَفَى ٱلۡبَنَاتِ عَلَى ٱلۡبَنِينَ﴿١٥٣

153ಅಲ್ಲಾಹು ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಪ್ರಾಶಸ್ತ್ಯ ನೀಡಿದನೇ?

مَا لَكُمۡ كَيۡفَ تَحۡكُمُونَ﴿١٥٤

154ನಿಮಗೇನಾಗಿದೆ? ನೀವು ಹೇಗೆ ತೀರ್ಪು ನೀಡುತ್ತಿದ್ದೀರಿ?

أَفَلَا تَذَكَّرُونَ﴿١٥٥

155ನೀವು ಆಲೋಚಿಸುವುದಿಲ್ಲವೇ?

أَمۡ لَكُمۡ سُلۡطَٰنٞ مُّبِينٞ﴿١٥٦

156ಇದಕ್ಕೆ ನಿಮ್ಮ ಬಳಿ ಯಾವುದಾದರೂ ಸ್ಪಷ್ಟ ಸಾಕ್ಷ್ಯಾಧಾರವಿದೆಯೇ?

فَأۡتُواْ بِكِتَٰبِكُمۡ إِن كُنتُمۡ صَٰدِقِينَ﴿١٥٧

157ಹಾಗಿದ್ದರೆ ನೀವು ನಿಮ್ಮ ಗ್ರಂಥವನ್ನು ತನ್ನಿರಿ. ನೀವು ಸತ್ಯವಂತರಾಗಿದ್ದರೆ!

وَجَعَلُواْ بَيۡنَهُۥ وَبَيۡنَ ٱلۡجِنَّةِ نَسَبٗاۚ وَلَقَدۡ عَلِمَتِ ٱلۡجِنَّةُ إِنَّهُمۡ لَمُحۡضَرُونَ﴿١٥٨

158ಅವರು ಅವನ (ಅಲ್ಲಾಹನ) ಮತ್ತು ಜಿನ್ನ್‌ಗಳ ಮಧ್ಯೆ ಕುಟುಂಬ ಸಂಬಂಧವನ್ನು ಸ್ಥಾಪಿಸಿದ್ದರು. ಆದರೆ (ಇಂತಹ ನಂಬಿಕೆಯಿರುವ ಜನರನ್ನು) ನಿಶ್ಚಯವಾಗಿಯೂ ಶಿಕ್ಷೆಗೆ ಹಾಜರುಪಡಿಸಲಾಗುವುದೆಂದು ಜಿನ್ನ್‌ಗಳಿಗೆ ತಿಳಿದಿದೆ.

سُبۡحَٰنَ ٱللَّهِ عَمَّا يَصِفُونَ﴿١٥٩

159ಅವರು (ಅಲ್ಲಾಹನ ಬಗ್ಗೆ) ವರ್ಣಿಸಿ ಹೇಳುವ ಇಂತಹ ಸುಳ್ಳುಗಳಿಂದ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ.

إِلَّا عِبَادَ ٱللَّهِ ٱلۡمُخۡلَصِينَ﴿١٦٠

160ಆದರೆ ಅಲ್ಲಾಹನ ನಿಷ್ಕಳಂಕ ದಾಸರು (ಇದರಿಂದ) ಹೊರತಾಗಿದ್ದಾರೆ.

فَإِنَّكُمۡ وَمَا تَعۡبُدُونَ﴿١٦١

161ನಿಶ್ಚಯವಾಗಿಯೂ ನೀವು ಮತ್ತು ನೀವು ಆರಾಧಿಸುತ್ತಿರುವ ದೇವರುಗಳು.

مَآ أَنتُمۡ عَلَيۡهِ بِفَٰتِنِينَ﴿١٦٢

162ಯಾರನ್ನೂ ಅವನಿಂದ (ಅಲ್ಲಾಹನಿಂದ) ತಪ್ಪಿಸಿಬಿಡಲು ನಿಮಗೆ ಸಾಧ್ಯವಿಲ್ಲ.

إِلَّا مَنۡ هُوَ صَالِ ٱلۡجَحِيمِ﴿١٦٣

163ನರಕವಾಸಿಯಾಗುವವನ ಹೊರತು.

وَمَا مِنَّآ إِلَّا لَهُۥ مَقَامٞ مَّعۡلُومٞ﴿١٦٤

164(ದೇವದೂತರು‍ಗಳು ಹೇಳುತ್ತಾರೆ): “ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದು ನಿಶ್ಚಿತ ಸ್ಥಾನವಿದೆ.

وَإِنَّا لَنَحۡنُ ٱلصَّآفُّونَ﴿١٦٥

165ನಿಶ್ಚಯವಾಗಿಯೂ ನಾವು (ಅಲ್ಲಾಹನನ್ನು ಆರಾಧಿಸಲು) ಸಾಲುಗಟ್ಟಿ ನಿಲ್ಲುತ್ತೇವೆ.

وَإِنَّا لَنَحۡنُ ٱلۡمُسَبِّحُونَ﴿١٦٦

166ನಿಶ್ಚಯವಾಗಿಯೂ ನಾವು (ಅಲ್ಲಾಹನ) ಪರಿಶುದ್ಧಿಯನ್ನು ಕೊಂಡಾಡುವವರಾಗಿದ್ದೇವೆ.”

وَإِن كَانُواْ لَيَقُولُونَ﴿١٦٧

167ನಿಶ್ಚಯವಾಗಿಯೂ ಅವರು (ಸತ್ಯನಿಷೇಧಿಗಳು) ಹೇಳುತ್ತಿದ್ದರು:

لَوۡ أَنَّ عِندَنَا ذِكۡرٗا مِّنَ ٱلۡأَوَّلِينَ﴿١٦٨

168“ನಮ್ಮ ಬಳಿ ಪೂರ್ವಜರ ಯಾವುದಾದರೂ ಉಪದೇಶವು ಇರುತ್ತಿದ್ದರೆ.

لَكُنَّا عِبَادَ ٱللَّهِ ٱلۡمُخۡلَصِينَ﴿١٦٩

169ನಾವು ಕೂಡ ಅಲ್ಲಾಹನ ನಿಷ್ಕಳಂಕ ದಾಸರಾಗಿರುತ್ತಿದ್ದೆವು.”

فَكَفَرُواْ بِهِۦۖ فَسَوۡفَ يَعۡلَمُونَ﴿١٧٠

170ಆದರೂ ಅವರು ಅದನ್ನು (ಪವಿತ್ರ ಕುರ್‌ಆನನ್ನು) ನಿಷೇಧಿಸಿದರು. ಆದ್ದರಿಂದ ಸದ್ಯವೇ ಅವರು ತಿಳಿಯುವರು.

وَلَقَدۡ سَبَقَتۡ كَلِمَتُنَا لِعِبَادِنَا ٱلۡمُرۡسَلِينَ﴿١٧١

171ನಮ್ಮ ವಾಗ್ದಾನವು ಸಂದೇಶವಾಹಕರುಗಳಾದ ನಮ್ಮ ದಾಸರಿಗೆ ಈಗಾಗಲೇ ಜಾರಿಯಾಗಿಬಿಟ್ಟಿದೆ.

إِنَّهُمۡ لَهُمُ ٱلۡمَنصُورُونَ﴿١٧٢

172(ಅದೇನೆಂದರೆ) ನಿಶ್ಚಯವಾಗಿಯೂ ಅವರಿಗೇ ಸಹಾಯ ಮಾಡಲಾಗುವುದೆಂದು.

وَإِنَّ جُندَنَا لَهُمُ ٱلۡغَٰلِبُونَ﴿١٧٣

173ನಿಶ್ಚಯವಾಗಿಯೂ ನಮ್ಮ ಸೈನ್ಯವೇ ವಿಜಯಿಯಾಗುವುದೆಂದು.

فَتَوَلَّ عَنۡهُمۡ حَتَّىٰ حِينٖ﴿١٧٤

174ಆದ್ದರಿಂದ ನೀವು ಕೆಲವು ದಿನಗಳ ತನಕ ಅವರಿಂದ ವಿಮುಖರಾಗಿರಿ.

وَأَبۡصِرۡهُمۡ فَسَوۡفَ يُبۡصِرُونَ﴿١٧٥

175ಅವರನ್ನು ವೀಕ್ಷಿಸುತ್ತಿರಿ. ಅವರು ಕೂಡ ಮುಂದೆ (ಏನಾಗುವುದೆಂದು) ನೋಡುವರು.

أَفَبِعَذَابِنَا يَسۡتَعۡجِلُونَ﴿١٧٦

176ಅವರು ನಮ್ಮ ಶಿಕ್ಷೆಗಾಗಿ ತ್ವರೆ ಮಾಡುತ್ತಿದ್ದಾರೆಯೇ?

فَإِذَا نَزَلَ بِسَاحَتِهِمۡ فَسَآءَ صَبَاحُ ٱلۡمُنذَرِينَ﴿١٧٧

177ಆದರೆ ನಮ್ಮ ಶಿಕ್ಷೆಯು ಅವರ ಅಂಗಳದಲ್ಲಿ ಇಳಿಯುವಾಗ ಮುನ್ನೆಚ್ಚರಿಕೆ ನೀಡಲಾದವರ ಮುಂಜಾನೆಯು ಬಹಳ ನಿಕೃಷ್ಟವಾಗಿರುವುದು!

وَتَوَلَّ عَنۡهُمۡ حَتَّىٰ حِينٖ﴿١٧٨

178ಆದ್ದರಿಂದ ನೀವು ಕೆಲವು ದಿನಗಳ ತನಕ ಅವರಿಂದ ವಿಮುಖರಾಗಿರಿ.

وَأَبۡصِرۡ فَسَوۡفَ يُبۡصِرُونَ﴿١٧٩

179ಅವರನ್ನು ವೀಕ್ಷಿಸುತ್ತಿರಿ. ಅವರು ಕೂಡ ಮುಂದೆ (ಏನಾಗುವುದೆಂದು) ನೋಡುವರು.

سُبۡحَٰنَ رَبِّكَ رَبِّ ٱلۡعِزَّةِ عَمَّا يَصِفُونَ﴿١٨٠

180ಮಹಾ ಪ್ರತಿಷ್ಠೆಯ ಒಡೆಯನಾದ ನಿಮ್ಮ ಪರಿಪಾಲಕನು (ಅಲ್ಲಾಹು) ಅವರು ವರ್ಣಿಸುವ ಎಲ್ಲಾ ಸುಳ್ಳುಗಳಿಂದ ಎಷ್ಟೋ ಪರಿಶುದ್ಧನಾಗಿದ್ದಾನೆ.

وَسَلَٰمٌ عَلَى ٱلۡمُرۡسَلِينَ﴿١٨١

181ಸಂದೇಶವಾಹಕರುಗಳ ಮೇಲೆ ಶಾಂತಿಯಿರಲಿ!

وَٱلۡحَمۡدُ لِلَّهِ رَبِّ ٱلۡعَٰلَمِينَ﴿١٨٢

182ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ.

RELATED SURAHS