الهمزة
The Gossipmonger • 9 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1ಅವಹೇಳನ ಮಾಡುವ ಮತ್ತು ಪರದೂಷಣೆ ಮಾಡುವ ಪ್ರತಿಯೊಬ್ಬನಿಗೂ ವಿನಾಶವಿದೆ.
2ಅವನು ಯಾರೆಂದರೆ ಸಂಪತ್ತು ಶೇಖರಿಸುವವನು ಮತ್ತು ಅದನ್ನು ಎಣಿಸುವವನು.
3ಅವನ ಸಂಪತ್ತು ಅವನನ್ನು ಶಾಶ್ವತಗೊಳಿಸುತ್ತದೆ ಎಂದು ಅವನು ಭಾವಿಸುತ್ತಾನೆ.
4ಇಲ್ಲವೇ ಇಲ್ಲ, ಅವನನ್ನು ತುಂಡು ತುಂಡಾಗಿ ಕತ್ತರಿಸುವ ಬೆಂಕಿಗೆ ಖಂಡಿತ ಎಸೆಯಲಾಗುವುದು.
5ತುಂಡು ತುಂಡಾಗಿ ಕತ್ತರಿಸುವ ಬೆಂಕಿ ಏನೆಂದು ನಿಮಗೇನು ಗೊತ್ತು?
6ಅದು ಭುಗಿಲೆದ್ದು ಉರಿಸಲಾದ ಅಲ್ಲಾಹನ ಬೆಂಕಿಯಾಗಿದೆ.
7ಅದು ಹೃದಯಗಳ ಮೇಲೆ ಏರಿ ಬರುತ್ತದೆ.
8ಅದು ಅವರನ್ನು ಎಲ್ಲಾ ಕಡೆಗಳಿಂದಲೂ ಮುಚ್ಚಿಕೊಳ್ಳುತ್ತದೆ.
9ದೊಡ್ಡ ದೊಡ್ಡ ಸ್ತಂಭಗಳಲ್ಲಿ.