التين
The Fig • 8 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1ಅಂಜೂರ ಮತ್ತು ಆಲಿವ್‌ನ ಮೇಲಾಣೆ!
2ತೂರ್ ಸಿನಾಯ್ ಪರ್ವತದ ಮೇಲಾಣೆ!
3ಈ ನಿರ್ಭಯ ನಗರದ (ಮಕ್ಕಾದ) ಮೇಲಾಣೆ!
4ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಅತ್ಯುತ್ತಮ ರೂಪದಲ್ಲಿ ಸೃಷ್ಟಿಸಿದೆವು.
5ನಂತರ ಅವನನ್ನು ನೀಚರಲ್ಲಿ ನೀಚನಾಗಿ ಮಾಡಿದೆವು.
6ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಇದರಿಂದ ಹೊರತಾಗಿದ್ದಾರೆ. ಅವರಿಗೆ ಎಂದೂ ಮುಗಿಯದ ಪ್ರತಿಫಲವಿದೆ.
7ಹಾಗಾದರೆ ಪ್ರತಿಫಲ ದಿನವನ್ನು ನಿಷೇಧಿಸುವಂತೆ ನಿನ್ನನ್ನು ಉತ್ತೇಜಿಸುವುದೇನು?
8ಅಲ್ಲಾಹು ಎಲ್ಲಾ ತೀರ್ಪುಗಾರರಿಗೂ ತೀರ್ಪುಗಾರನಲ್ಲವೇ?