الضحى
The Morning Hours • 11 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1ಪೂರ್ವಾಹ್ನದ ಮೇಲಾಣೆ!
2ರಾತ್ರಿಯ ಮೇಲಾಣೆ! ಅದು (ಕತ್ತಲೆಯಿಂದ) ಆವರಿಸುವಾಗ.
3(ಪ್ರವಾದಿಯವರೇ) ನಿಮ್ಮ ಪರಿಪಾಲಕನು (ಅಲ್ಲಾಹು) ನಿಮ್ಮನ್ನು ತೊರೆದಿಲ್ಲ ಮತ್ತು ನಿಮ್ಮ ಬಗ್ಗೆ ಬೇಸರಪಟ್ಟಿಲ್ಲ.
4ನಿಶ್ಚಯವಾಗಿಯೂ ನಿಮಗೆ ಇಹಲೋಕಕ್ಕಿಂತಲೂ ಪರಲೋಕವು ಶ್ರೇಷ್ಠವಾಗಿದೆ.
5ನಿಮ್ಮ ಪರಿಪಾಲಕನು (ಅಲ್ಲಾಹು) ಸದ್ಯವೇ ನಿಮಗೆ (ಅನುಗ್ರಹಗಳನ್ನು) ದಯಪಾಲಿಸುವನು. ಆಗ ನೀವು ಸಂತೃಪ್ತರಾಗುವಿರಿ.
6ಅವನು ನಿಮ್ಮನ್ನು ಅನಾಥನಾಗಿ ಕಂಡು ನಿಮಗೆ ಆಶ್ರಯ ನೀಡಲಿಲ್ಲವೇ?
7ಅವನು ನಿಮ್ಮನ್ನು ದಾರಿ ತಪ್ಪಿದವನಾಗಿ ಕಂಡು ನಿಮಗೆ ಮಾರ್ಗದರ್ಶನ ಮಾಡಿದನು.
8ಅವನು ನಿಮ್ಮನ್ನು ಬಡವನಾಗಿ ಕಂಡು ನಿಮಗೆ ಐಶ್ವರ್ಯವನ್ನು ನೀಡಿದನು.
9ಆದ್ದರಿಂದ ನೀವು ಅನಾಥನೊಡನೆ ಕಠಿಣವಾಗಿ ವರ್ತಿಸಬೇಡಿ.
10ಬೇಡುವವನನ್ನು ಗದರಿಸಬೇಡಿ.
11ನಿಮ್ಮ ಪರಿಪಾಲಕನ (ಅಲ್ಲಾಹನ) ಅನುಗ್ರಹಗಳ ಬಗ್ಗೆ ಮಾತನಾಡುತ್ತಿರಿ.