الانشقاق
The Splitting Open • 25 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1ಆಕಾಶವು ಒಡೆದು ಸೀಳುವಾಗ.
2ಅದು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಗೆ ಕಿವಿಗೊಡುವಾಗ. ಅದು ಅದಕ್ಕೆ ಅರ್ಹವಾಗಿದೆ.[1]
3ಭೂಮಿಯು ವಿಸ್ತರಿಸಲಾಗುವಾಗ.
4ಅದು ಅದರೊಳಗಿರುವುದನ್ನು ಹೊರಗೆಸೆದು ಬರಿದಾಗುವಾಗ.
5ಅದು ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಗೆ ಕಿವಿಗೊಡುವಾಗ. ಅದು ಅದಕ್ಕೆ ಅರ್ಹವಾಗಿದೆ.
6ಓ ಮನುಷ್ಯನೇ! ನೀನು ನಿನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವ ತನಕ ಎಲ್ಲಾ ರೀತಿಯ ಕಠಿಣ ಪರಿಶ್ರಮ ಮಾಡಿ ನಂತರ ಅವನನ್ನು ಭೇಟಿಯಾಗುವೆ.
7ಆಗ ಯಾರಿಗೆ ಅವನ ಗ್ರಂಥವನ್ನು ಬಲಗೈಯಲ್ಲಿ ನೀಡಲಾಗುತ್ತದೋ,
8ಅವನನ್ನು ಅತ್ಯಂತ ಸರಳವಾಗಿ ವಿಚಾರಣೆ ಮಾಡಲಾಗುವುದು.
9ಅವನು ತನ್ನ ಮನೆಯವರ ಬಳಿಗೆ ಸಂತೋಷದಿಂದ ಮರಳುವನು.
10ಆದರೆ ಯಾರಿಗೆ ಅವನ ಗ್ರಂಥವನ್ನು ಬೆನ್ನ ಹಿಂದಿನಿಂದ ನೀಡಲಾಗುತ್ತದೋ.
11ಅವನು ಸಾವನ್ನು ಕರೆಯುವನು.
12ಮತ್ತು ಧಗಧಗನೆ ಉರಿಯುವ ನರಕಾಗ್ನಿಯನ್ನು ಪ್ರವೇಶಿಸುವನು.
13ನಿಶ್ಚಯವಾಗಿಯೂ ಅವನು (ಇಹಲೋಕದಲ್ಲಿ) ಅವನ ಮನೆಯವರೊಡನೆ ಸಂತೋಷವಾಗಿದ್ದನು.
14ಅಲ್ಲಾಹನ ಬಳಿಗೆ ಮರಳಿ ಹೋಗುವುದೇ ಇಲ್ಲವೆಂದು ಅವನು ಭಾವಿಸಿದ್ದನು.
15ಹೌದು! ನಿಶ್ಚಯವಾಗಿಯೂ ಅವನ ಪರಿಪಾಲಕನು (ಅಲ್ಲಾಹು) ಅವನನ್ನು ನೋಡುತ್ತಿದ್ದನು.
16ನಾನು ಮುಸ್ಸಂಜೆಯ ಮೇಲೆ ಆಣೆ ಮಾಡುತ್ತೇನೆ.
17ರಾತ್ರಿಯ ಮೇಲೆ ಮತ್ತು ಅದು ಒಟ್ಟುಗೂಡಿಸುವ ವಸ್ತುಗಳ ಮೇಲಾಣೆ![1]
18ಚಂದ್ರನ ಮೇಲಾಣೆ! ಅದು ಪೂರ್ಣರೂಪವನ್ನು ಪಡೆಯುವಾಗ.
19ನಿಶ್ಚಯವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪುತ್ತೀರಿ.[1]
20ಅವರಿಗೇನಾಗಿದೆ? ಅವರೇಕೆ ವಿಶ್ವಾಸವಿಡುವುದಿಲ್ಲ?
21ಅವರಿಗೆ ಕುರ್‌ಆನನ್ನು ಓದಿಕೊಡಲಾದರೆ ಅವರು ಸಾಷ್ಟಾಂಗ ಮಾಡುವುದಿಲ್ಲ.
22ಆದರೆ ಆ ಸತ್ಯನಿಷೇಧಿಗಳು ನಿಷೇಧಿಸುತ್ತಿದ್ದಾರೆ.
23ಅವರು ಅವರ ಒಡಲಲ್ಲಿ ಮುಚ್ಚಿಡುವುದನ್ನು ಅಲ್ಲಾಹು ಬಹಳ ಚೆನ್ನಾಗಿ ತಿಳಿಯುತ್ತಾನೆ.
24ಅವರಿಗೆ ಯಾತನಾಮಯ ಶಿಕ್ಷೆಯ ಸುವಾರ್ತೆ ನೀಡಿರಿ.
25ಆದರೆ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಇದಕ್ಕೆ ಹೊರತಾಗಿದ್ದಾರೆ. ಅವರಿಗೆ ಎಂದೂ ಮುಗಿಯದ ಪ್ರತಿಫಲವಿದೆ.