التكاثر
The Rivalry in Worldly Increase • 8 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1ಹೆಚ್ಚು ಸಿಗಬೇಕೆಂಬ ನಿಮ್ಮ ದುರಾಸೆಯು ನಿಮ್ಮನ್ನು ಅಲಕ್ಷ್ಯದಲ್ಲಿರಿಸಿದೆ.
2ಎಲ್ಲಿಯವರೆಗೆಂದರೆ ನೀವು ಸಮಾಧಿ ಸ್ಥಳವನ್ನು ತಲುಪುವ ತನಕ.
3ಇಲ್ಲವೇ ಇಲ್ಲ, ಸದ್ಯವೇ ನೀವು ತಿಳಿಯುವಿರಿ.
4ಇಲ್ಲವೇ ಇಲ್ಲ, ನಂತರ ನಿಮಗೆ (ಎಲ್ಲವೂ) ತಿಳಿಯಲಿದೆ.
5ಇಲ್ಲವೇ ಇಲ್ಲ, ನೀವು ದೃಢವಾಗಿ ತಿಳಿದಿರುತ್ತಿದ್ದರೆ.
6ಖಂಡಿತವಾಗಿಯೂ ನೀವು ನರಕವನ್ನು ನೋಡುವಿರಿ.
7ನಂತರ ನೀವು ಅದನ್ನು ಖಚಿತವಾದ ಕಣ್ಣುಗಳಿಂದ ನೋಡುವಿರಿ.
8ನಂತರ ಆ ದಿನದಂದು (ನಿಮಗೆ ದಯಪಾಲಿಸಲಾದ) ಎಲ್ಲಾ ಅನುಗ್ರಹಗಳ ಬಗ್ಗೆ ನಿಮ್ಮೊಡನೆ ಖಂಡಿತವಾಗಿಯೂ ಪ್ರಶ್ನಿಸಲಾಗುವುದು.