Al-Waqi'ah

الواقعة

The Event96 ayahsMeccan

بِسْمِ ٱللَّهِ ٱلرَّحْمَٰنِ ٱلرَّحِيمِ

إِذَا وَقَعَتِ ٱلۡوَاقِعَةُ﴿١

1ಪುನರುತ್ಥಾನವು ಸಂಭವಿಸುವಾಗ.

لَيۡسَ لِوَقۡعَتِهَا كَاذِبَةٌ﴿٢

2ಅದು ಸಂಭವಿಸುತ್ತದೆ ಎಂಬುದರಲ್ಲಿ ಯಾವುದೇ ನಿರಾಕರಣೆಯಿಲ್ಲ.

خَافِضَةٞ رَّافِعَةٌ﴿٣

3ಅದು (ಕೆಲವರನ್ನು) ಕೆಳಗಿಳಿಸುತ್ತದೆ ಮತ್ತು (ಕೆಲವರನ್ನು) ಮೇಲೇರಿಸುತ್ತದೆ.[1]

إِذَا رُجَّتِ ٱلۡأَرۡضُ رَجّٗا﴿٤

4ಭೂಮಿಯನ್ನು ತೀಕ್ಷ್ಣವಾಗಿ ನಡುಗಿಸಲಾಗುವಾಗ.

وَبُسَّتِ ٱلۡجِبَالُ بَسّٗا﴿٥

5ಪರ್ವತಗಳು ಸಂಪೂರ್ಣ ನುಚ್ಚುನೂರಾಗುವಾಗ.

فَكَانَتۡ هَبَآءٗ مُّنۢبَثّٗا﴿٦

6ಅವು ಚೆದರಿದ ಧೂಳಿಯಾಗುವಾಗ.

وَكُنتُمۡ أَزۡوَٰجٗا ثَلَٰثَةٗ﴿٧

7ನೀವು ಮೂರು ಗುಂಪುಗಳಾಗುವಿರಿ.

فَأَصۡحَٰبُ ٱلۡمَيۡمَنَةِ مَآ أَصۡحَٰبُ ٱلۡمَيۡمَنَةِ﴿٨

8ಬಲಭಾಗದ ಜನರು—ಬಲಭಾಗದ ಜನರ ಸ್ಥಿತಿಯೇನು?[1]

وَأَصۡحَٰبُ ٱلۡمَشۡـَٔمَةِ مَآ أَصۡحَٰبُ ٱلۡمَشۡـَٔمَةِ﴿٩

9ಎಡಭಾಗದ ಜನರು—ಎಡಭಾಗದ ಜನರ ಸ್ಥಿತಿಯೇನು?[1]

وَٱلسَّٰبِقُونَ ٱلسَّٰبِقُونَ﴿١٠

10ಮುಂಚೂಣಿಯಲ್ಲಿದ್ದವರು ಮುಂಚೂಣಿಯಲ್ಲಿಯೇ ಇರುವರು.[1]

أُوْلَٰٓئِكَ ٱلۡمُقَرَّبُونَ﴿١١

11ಅವರು (ಅಲ್ಲಾಹನ) ಸಾಮೀಪ್ಯ ಪಡೆದವರು.

فِي جَنَّٰتِ ٱلنَّعِيمِ﴿١٢

12ಅವರು ಸುಖಾನುಗ್ರಹಗಳು ತುಂಬಿದ ಸ್ವರ್ಗಗಳಲ್ಲಿರುವರು.

ثُلَّةٞ مِّنَ ٱلۡأَوَّلِينَ﴿١٣

13ಮೊದಲಿನವರಲ್ಲಿ ಸೇರಿದ ಒಂದು (ದೊಡ್ಡ) ಗುಂಪು.

وَقَلِيلٞ مِّنَ ٱلۡأٓخِرِينَ﴿١٤

14ನಂತರದವರಲ್ಲಿ ಸೇರಿದ ಕೆಲವರು.

عَلَىٰ سُرُرٖ مَّوۡضُونَةٖ﴿١٥

15ಅವರು ಸ್ವರ್ಣದಾರದಿಂದ ನೇಯ್ದ ಮಂಚಗಳಲ್ಲಿರುವರು.

مُّتَّكِـِٔينَ عَلَيۡهَا مُتَقَٰبِلِينَ﴿١٦

16ಅವುಗಳಲ್ಲಿ ಪರಸ್ಪರ ಎದುರುಬದುರಾಗಿ ಒರಗಿ ಕುಳಿತಿರುವರು.

يَطُوفُ عَلَيۡهِمۡ وِلۡدَٰنٞ مُّخَلَّدُونَ﴿١٧

17ಚಿರಂಜೀವಿಗಳಾದ ಹುಡುಗರು ಅವರ ನಡುವೆ ಸುತ್ತುವರು.[1]

بِأَكۡوَابٖ وَأَبَارِيقَ وَكَأۡسٖ مِّن مَّعِينٖ﴿١٨

18ಲೋಟಗಳು, ಹೂಜಿಗಳು ಮತ್ತು ಹರಿಯುವ ತೊರೆಯ ಶರಾಬನ್ನು ಹೊಂದಿರುವ ಪಾತ್ರೆಗಳೊಂದಿಗೆ.

لَّا يُصَدَّعُونَ عَنۡهَا وَلَا يُنزِفُونَ﴿١٩

19ಅದನ್ನು ಕುಡಿಯುವುದರಿಂದ ತಲೆನೋವು ಅಥವಾ ಅಮಲು ಉಂಟಾಗುವುದಿಲ್ಲ.

وَفَٰكِهَةٖ مِّمَّا يَتَخَيَّرُونَ﴿٢٠

20ಅವರಿಗೆ ಇಷ್ಟವಾದ ಹಣ್ಣುಗಳೊಂದಿಗೆ.

وَلَحۡمِ طَيۡرٖ مِّمَّا يَشۡتَهُونَ﴿٢١

21ಅವರು ಬಯಸುವ ಹಕ್ಕಿಗಳ ಮಾಂಸಗಳೊಂದಿಗೆ.

وَحُورٌ عِينٞ﴿٢٢

22(ಅಲ್ಲಿ) ಅರಳಿದ ಕಣ್ಣುಗಳಿರುವ ಬೆಳ್ಳಗಿನ ಅಪ್ಸರೆಗಳಿರುವರು.

كَأَمۡثَٰلِ ٱللُّؤۡلُوِٕ ٱلۡمَكۡنُونِ﴿٢٣

23ಅವರು (ಚಿಪ್ಪುಗಳಲ್ಲಿ) ಜೋಪಾನವಾಗಿಡಲಾದ ಮುತ್ತುಗಳಂತೆ ಕಾಣುವರು.

جَزَآءَۢ بِمَا كَانُواْ يَعۡمَلُونَ﴿٢٤

24ಇವೆಲ್ಲವೂ ಅವರು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿವೆ.

لَا يَسۡمَعُونَ فِيهَا لَغۡوٗا وَلَا تَأۡثِيمًا﴿٢٥

25ಅವರು ಅಲ್ಲಿ ಅನಗತ್ಯ ಮಾತುಗಳನ್ನು ಮತ್ತು ದೋಷಪೂರಿತ ಮಾತುಗಳನ್ನು ಕೇಳುವುದಿಲ್ಲ.

إِلَّا قِيلٗا سَلَٰمٗا سَلَٰمٗا﴿٢٦

26ಸಲಾಂ ಸಲಾಂ (ಶಾಂತಿ ಶಾಂತಿ) ಎಂಬ ಮಾತುಗಳ ಹೊರತು.

وَأَصۡحَٰبُ ٱلۡيَمِينِ مَآ أَصۡحَٰبُ ٱلۡيَمِينِ﴿٢٧

27ಬಲಭಾಗದ ಜನರು—ಬಲಭಾಗದ ಜನರ ಸ್ಥಿತಿಯೇನು?

فِي سِدۡرٖ مَّخۡضُودٖ﴿٢٨

28ಅವರು ಮುಳ್ಳುಗಳಿಲ್ಲದ ಬೋರೆ ಮರಗಳಲ್ಲಿ.

وَطَلۡحٖ مَّنضُودٖ﴿٢٩

29ಪದರ ಪದರ ಗೊನೆಗಳಿರುವ ಬಾಳೆಗಳಲ್ಲಿ.

وَظِلّٖ مَّمۡدُودٖ﴿٣٠

30ಸುದೀರ್ಘ ನೆರಳಿನಲ್ಲಿ.

وَمَآءٖ مَّسۡكُوبٖ﴿٣١

31ಹರಿಯುವ ನೀರಿನಲ್ಲಿ.

وَفَٰكِهَةٖ كَثِيرَةٖ﴿٣٢

32ಹೇರಳ ಹಣ್ಣು-ಹಂಪಲುಗಳಲ್ಲಿ.

لَّا مَقۡطُوعَةٖ وَلَا مَمۡنُوعَةٖ﴿٣٣

33ಅದು ಎಂದಿಗೂ ಮುಗಿಯುವುದಿಲ್ಲ ಮತ್ತು ತಡೆಯಲ್ಪಡುವುದಿಲ್ಲ.

وَفُرُشٖ مَّرۡفُوعَةٍ﴿٣٤

34ಎತ್ತರವಾಗಿರುವ ಹಾಸಿಗೆಗಳಲ್ಲಿ.

إِنَّآ أَنشَأۡنَٰهُنَّ إِنشَآءٗ﴿٣٥

35ನಿಶ್ಚಯವಾಗಿಯೂ ನಾವು ಅವರ ಪತ್ನಿಯರನ್ನು ವಿಶೇಷ ರೀತಿಯಲ್ಲಿ ಸೃಷ್ಟಿಸಿದ್ದೇವೆ.

فَجَعَلۡنَٰهُنَّ أَبۡكَارًا﴿٣٦

36ನಾವು ಅವರನ್ನು ಕನ್ಯೆಯರಾಗಿ ಮಾಡಿದ್ದೇವೆ.

عُرُبًا أَتۡرَابٗا﴿٣٧

37ಪ್ರೀತಿಸುವವರಾಗಿ ಮತ್ತು ಸಮವಯಸ್ಕರಾಗಿ.

لِّأَصۡحَٰبِ ٱلۡيَمِينِ﴿٣٨

38ಇವೆಲ್ಲವೂ ಬಲಭಾಗದ ಜನರಿಗೋಸ್ಕರ.

ثُلَّةٞ مِّنَ ٱلۡأَوَّلِينَ﴿٣٩

39ಅವರು ಮೊದಲಿನವರಲ್ಲಿ ಸೇರಿದ ಒಂದು (ದೊಡ್ಡ) ಗುಂಪು.

وَثُلَّةٞ مِّنَ ٱلۡأٓخِرِينَ﴿٤٠

40ನಂತರದವರಲ್ಲಿ ಸೇರಿದ ಒಂದು (ದೊಡ್ಡ) ಗುಂಪು.

وَأَصۡحَٰبُ ٱلشِّمَالِ مَآ أَصۡحَٰبُ ٱلشِّمَالِ﴿٤١

41ಎಡಭಾಗದ ಜನರು—ಎಡಭಾಗದ ಜನರ ಸ್ಥಿತಿಯೇನು?

فِي سَمُومٖ وَحَمِيمٖ﴿٤٢

42ಅವರು ಬಿಸಿ ಗಾಳಿ ಮತ್ತು ಕುದಿಯುವ ನೀರಿನಲ್ಲಿರುವರು.

وَظِلّٖ مِّن يَحۡمُومٖ﴿٤٣

43ಕರಿ ಹೊಗೆಯ ನೆರಳುಗಳಲ್ಲಿ.

لَّا بَارِدٖ وَلَا كَرِيمٍ﴿٤٤

44ಅದು ತಂಪಾಗಿಲ್ಲ ಅಥವಾ ಆಹ್ಲಾದಕರವಾಗಿಲ್ಲ.

إِنَّهُمۡ كَانُواْ قَبۡلَ ذَٰلِكَ مُتۡرَفِينَ﴿٤٥

45ಇದಕ್ಕಿಂತ ಮೊದಲು (ಇಹಲೋಕದಲ್ಲಿ) ಅವರು ಐಶ್ವರ್ಯವಂತರಾಗಿದ್ದರು.

وَكَانُواْ يُصِرُّونَ عَلَى ٱلۡحِنثِ ٱلۡعَظِيمِ﴿٤٦

46ಅವರು ದೊಡ್ಡ ದೊಡ್ಡ ಪಾಪಕೃತ್ಯಗಳಲ್ಲಿ ಪಟ್ಟುಹಿಡಿದು ಮುಂದುವರಿಯುತ್ತಿದ್ದರು.

وَكَانُواْ يَقُولُونَ أَئِذَا مِتۡنَا وَكُنَّا تُرَابٗا وَعِظَٰمًا أَءِنَّا لَمَبۡعُوثُونَ﴿٤٧

47ಅವರು ಹೇಳುತ್ತಿದ್ದರು: “ನಾವು ಸತ್ತು ಮಣ್ಣು ಮತ್ತು ಮೂಳೆಗಳಾಗಿ ಬಿಟ್ಟ ಬಳಿಕ ನಮ್ಮನ್ನು ಪುನಃ ಜೀವಂತವಾಗಿ ಎಬ್ಬಿಸಲಾಗುವುದೇ?

أَوَءَابَآؤُنَا ٱلۡأَوَّلُونَ﴿٤٨

48ನಮ್ಮ ಪೂರ್ವಜರನ್ನು ಕೂಡ?”

قُلۡ إِنَّ ٱلۡأَوَّلِينَ وَٱلۡأٓخِرِينَ﴿٤٩

49ಹೇಳಿರಿ: “ನಿಶ್ಚಯವಾಗಿಯೂ ನಿಮ್ಮಲ್ಲಿ ಮೊದಲಿನವರನ್ನು ಮತ್ತು ನಂತರದವರನ್ನು.

لَمَجۡمُوعُونَ إِلَىٰ مِيقَٰتِ يَوۡمٖ مَّعۡلُومٖ﴿٥٠

50ಒಂದು ನಿಶ್ಚಿತ ದಿನದ ಸಮಯದಲ್ಲಿ ಒಟ್ಟುಗೂಡಿಸಲಾಗುವುದು.

ثُمَّ إِنَّكُمۡ أَيُّهَا ٱلضَّآلُّونَ ٱلۡمُكَذِّبُونَ﴿٥١

51ನಂತರ, ಓ ಸತ್ಯನಿಷೇಧಿಗಳಾದ ದುರ್ಮಾರ್ಗಿಗಳೇ!

لَأٓكِلُونَ مِن شَجَرٖ مِّن زَقُّومٖ﴿٥٢

52ನೀವು ಖಂಡಿತ ಝಕ್ಕೂಮ್ ಮರದಿಂದ ತಿನ್ನುವಿರಿ.

فَمَالِـُٔونَ مِنۡهَا ٱلۡبُطُونَ﴿٥٣

53ಅದರಿಂದ ನಿಮ್ಮ ಹೊಟ್ಟೆಗಳನ್ನು ತುಂಬಿಸುವಿರಿ.

فَشَٰرِبُونَ عَلَيۡهِ مِنَ ٱلۡحَمِيمِ﴿٥٤

54ಅದರ ಮೇಲೆ ನೀವು ಕುದಿಯುವ ನೀರನ್ನು ಕುಡಿಯುವಿರಿ.

فَشَٰرِبُونَ شُرۡبَ ٱلۡهِيمِ﴿٥٥

55ಬಾಯಾರಿದ ಒಂಟೆಗಳು ಕುಡಿಯುವಂತೆ ಕುಡಿಯುವಿರಿ.

هَٰذَا نُزُلُهُمۡ يَوۡمَ ٱلدِّينِ﴿٥٦

56ಇದು ಪ್ರತಿಫಲ ದಿನದಂದು ಅವರಿಗೆ ನೀಡಲಾಗುವ ಸತ್ಕಾರವಾಗಿದೆ.”

نَحۡنُ خَلَقۡنَٰكُمۡ فَلَوۡلَا تُصَدِّقُونَ﴿٥٧

57ನಾವೇ ನಿಮ್ಮನ್ನು ಸೃಷ್ಟಿಸಿದವರು. ಆದರೂ ನೀವು ನಂಬುವುದಿಲ್ಲವೇಕೆ?

أَفَرَءَيۡتُم مَّا تُمۡنُونَ﴿٥٨

58ನೀವು ಸ್ರವಿಸುವ ವೀರ್ಯವನ್ನು ನೋಡಿದ್ದೀರಾ?

ءَأَنتُمۡ تَخۡلُقُونَهُۥٓ أَمۡ نَحۡنُ ٱلۡخَٰلِقُونَ﴿٥٩

59ಅದರಿಂದ ಮನುಷ್ಯನನ್ನು ಸೃಷ್ಟಿಸುವವರು ನೀವೋ? ಅಥವಾ ಸೃಷ್ಟಿಕರ್ತರು ನಾವೋ?

نَحۡنُ قَدَّرۡنَا بَيۡنَكُمُ ٱلۡمَوۡتَ وَمَا نَحۡنُ بِمَسۡبُوقِينَ﴿٦٠

60ನಾವೇ ನಿಮ್ಮ ನಡುವೆ ಮರಣವನ್ನು ನಿಶ್ಚಯಿಸಿದವರು. ನಾವು ಸೋಲುವುದಿಲ್ಲ,

عَلَىٰٓ أَن نُّبَدِّلَ أَمۡثَٰلَكُمۡ وَنُنشِئَكُمۡ فِي مَا لَا تَعۡلَمُونَ﴿٦١

61ನಿಮ್ಮ ಸ್ಥಾನದಲ್ಲಿ ನಿಮ್ಮಂತಹವರನ್ನು ಸೃಷ್ಟಿಸುವ ಮತ್ತು ನಿಮ್ಮನ್ನು ನಿಮಗೆ (ಸ್ವಲ್ಪವೂ) ತಿಳಿದಿಲ್ಲದ ಹೊಸ ರೂಪದಲ್ಲಿ ಸೃಷ್ಟಿಸುವ ವಿಷಯದಲ್ಲಿ.

وَلَقَدۡ عَلِمۡتُمُ ٱلنَّشۡأَةَ ٱلۡأُولَىٰ فَلَوۡلَا تَذَكَّرُونَ﴿٦٢

62ಪ್ರಥಮ ಬಾರಿ ಸೃಷ್ಟಿಸಿದ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಆದರೂ ನೀವೇಕೆ ಪಾಠ ಕಲಿಯುವುದಿಲ್ಲ?

أَفَرَءَيۡتُم مَّا تَحۡرُثُونَ﴿٦٣

63ನೀವು ಬಿತ್ತುವ (ಬೀಜವನ್ನು) ನೀವು ನೋಡಿದ್ದೀರಾ?

ءَأَنتُمۡ تَزۡرَعُونَهُۥٓ أَمۡ نَحۡنُ ٱلزَّٰرِعُونَ﴿٦٤

64ಅದನ್ನು ನೀವು (ಸಸ್ಯವಾಗಿ) ಬೆಳೆಸುತ್ತೀರೋ? ಅಥವಾ ಬೆಳೆಸುವವರು ನಾವೋ?

لَوۡ نَشَآءُ لَجَعَلۡنَٰهُ حُطَٰمٗا فَظَلۡتُمۡ تَفَكَّهُونَ﴿٦٥

65ನಾವು ಇಚ್ಛಿಸಿದರೆ ಅದನ್ನು (ಸಸ್ಯವನ್ನು) ಕಸಕಡ್ಡಿಯಾಗಿ ಮಾಡುತ್ತಿದ್ದೆವು. ಆಗ ನೀವು ಅಚ್ಚರಿಯಿಂದ ಹೇಳುವಿರಿ:

إِنَّا لَمُغۡرَمُونَ﴿٦٦

66“ನಾವು ನಷ್ಟದ ಹೊರೆಯನ್ನು ಹೊರಬೇಕಾಗಿ ಬಂದಿದೆ.

بَلۡ نَحۡنُ مَحۡرُومُونَ﴿٦٧

67ಅಲ್ಲ, ವಾಸ್ತವವಾಗಿ ನಮಗೆ ತಡೆಯಲಾಗಿದೆ.”

أَفَرَءَيۡتُمُ ٱلۡمَآءَ ٱلَّذِي تَشۡرَبُونَ﴿٦٨

68ನೀವು ಕುಡಿಯುವ ನೀರನ್ನು ನೀವು ನೋಡಿದ್ದೀರಾ?

ءَأَنتُمۡ أَنزَلۡتُمُوهُ مِنَ ٱلۡمُزۡنِ أَمۡ نَحۡنُ ٱلۡمُنزِلُونَ﴿٦٩

69ಅದನ್ನು ಮೋಡದಿಂದ ಸುರಿಸಿದವರು ನೀವೋ? ಅಥವಾ ಸುರಿಸುವವರು ನಾವೋ?

لَوۡ نَشَآءُ جَعَلۡنَٰهُ أُجَاجٗا فَلَوۡلَا تَشۡكُرُونَ﴿٧٠

70ನಾವು ಇಚ್ಛಿಸಿದರೆ ಅದನ್ನು ಕಹಿಯಾಗಿ ಮಾಡುತ್ತಿದ್ದೆವು. ಆದರೂ ನೀವು ಕೃತಜ್ಞರಾಗುವುದಿಲ್ಲವೇ?

أَفَرَءَيۡتُمُ ٱلنَّارَ ٱلَّتِي تُورُونَ﴿٧١

71ನೀವು ಉರಿಸುವ ಬೆಂಕಿಯನ್ನು ನೀವು ನೋಡಿದ್ದೀರಾ?

ءَأَنتُمۡ أَنشَأۡتُمۡ شَجَرَتَهَآ أَمۡ نَحۡنُ ٱلۡمُنشِـُٔونَ﴿٧٢

72ಅದರ ಮರವನ್ನು ಸೃಷ್ಟಿಸಿದ್ದು ನೀವೋ? ಅಥವಾ ಸೃಷ್ಟಿಸುವವರು ನಾವೋ?

نَحۡنُ جَعَلۡنَٰهَا تَذۡكِرَةٗ وَمَتَٰعٗا لِّلۡمُقۡوِينَ﴿٧٣

73ನಾವು ಅದನ್ನೊಂದು ಉಪದೇಶವಾಗಿ ಮತ್ತು ಪ್ರಯಾಣಿಕರಿಗೆ ಸವಲತ್ತಾಗಿ ಮಾಡಿದ್ದೇವೆ.[1]

فَسَبِّحۡ بِٱسۡمِ رَبِّكَ ٱلۡعَظِيمِ﴿٧٤

74ಆದ್ದರಿಂದ ನೀವು ಮಹತ್ವಪೂರ್ಣನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು (ಅವನ ಪರಿಶುದ್ಧತೆಯನ್ನು) ಕೊಂಡಾಡಿರಿ.

۞ فَلَآ أُقۡسِمُ بِمَوَٰقِعِ ٱلنُّجُومِ﴿٧٥

75ನಾನು ನಕ್ಷತ್ರಗಳ ಅಸ್ತಮ ಸ್ಥಾನದ ಮೇಲೆ ಆಣೆ ಮಾಡಿ ಹೇಳುತ್ತೇನೆ.

وَإِنَّهُۥ لَقَسَمٞ لَّوۡ تَعۡلَمُونَ عَظِيمٌ﴿٧٦

76ನೀವು ತಿಳಿದಿದ್ದರೆ ಅದು ಬಹಳ ದೊಡ್ಡ ಆಣೆಯಾಗಿದೆ.

إِنَّهُۥ لَقُرۡءَانٞ كَرِيمٞ﴿٧٧

77ನಿಶ್ಚಯವಾಗಿಯೂ ಈ ಕುರ್‌ಆನ್ ಅತ್ಯಂತ ಆದರಣೀಯವಾಗಿದೆ.

فِي كِتَٰبٖ مَّكۡنُونٖ﴿٧٨

78ಅದು ಭದ್ರವಾದ ಒಂದು ಗ್ರಂಥದಲ್ಲಿದೆ.

لَّا يَمَسُّهُۥٓ إِلَّا ٱلۡمُطَهَّرُونَ﴿٧٩

79ಅದನ್ನು ಪರಿಶುದ್ಧ ಜನರು (ದೇವದೂತರುಗಳು) ಮಾತ್ರ ಸ್ಪರ್ಶಿಸುತ್ತಾರೆ.[1]

تَنزِيلٞ مِّن رَّبِّ ٱلۡعَٰلَمِينَ﴿٨٠

80ಅದು ಸರ್ವಲೋಕಗಳ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾಗಿದೆ.

أَفَبِهَٰذَا ٱلۡحَدِيثِ أَنتُم مُّدۡهِنُونَ﴿٨١

81ಹಾಗಾದರೆ ಈ ಮಾತುಗಳನ್ನು (ಕುರ್‌ಆನನ್ನು) ನೀವು ಅನಪೇಕ್ಷಿತವಾಗಿ ಸ್ವೀಕರಿಸುತ್ತೀರಾ?

وَتَجۡعَلُونَ رِزۡقَكُمۡ أَنَّكُمۡ تُكَذِّبُونَ﴿٨٢

82ಸತ್ಯವನ್ನು ನಿಷೇಧಿಸುವುದನ್ನೇ ನಿಮ್ಮ (ಪರಿಪಾಲಕನು ಒದಗಿಸಿದ) ಉಪಜೀವನಕ್ಕೆ (ಕೃತಜ್ಞತೆಯಾಗಿ) ಮಾಡಿಕೊಳ್ಳುತ್ತೀರಾ?

فَلَوۡلَآ إِذَا بَلَغَتِ ٱلۡحُلۡقُومَ﴿٨٣

83ಆದರೆ ಪ್ರಾಣವು ಗಂಟಲಿಗೆ ತಲುಪುವಾಗ,

وَأَنتُمۡ حِينَئِذٖ تَنظُرُونَ﴿٨٤

84ಆ ವೇಳೆಯಲ್ಲಿ ನೀವು ನೋಡುತ್ತಲೇ ಇರುವಿರಿ.

وَنَحۡنُ أَقۡرَبُ إِلَيۡهِ مِنكُمۡ وَلَٰكِن لَّا تُبۡصِرُونَ﴿٨٥

85ನಾವು ಆ ವ್ಯಕ್ತಿಗೆ ನಿಮಗಿಂತಲೂ ಹೆಚ್ಚು ಹತ್ತಿರದಲ್ಲಿದ್ದೇವೆ. ಆದರೆ ನಿಮಗೆ ನೋಡಲು ಸಾಧ್ಯವಾಗುವುದಿಲ್ಲ.

فَلَوۡلَآ إِن كُنتُمۡ غَيۡرَ مَدِينِينَ﴿٨٦

86ನೀವು ಇನ್ನೊಬ್ಬರ (ಅಲ್ಲಾಹನ) ಆಜ್ಞೆಗೆ ವಿಧೇಯರಲ್ಲದಿದ್ದರೆ,

تَرۡجِعُونَهَآ إِن كُنتُمۡ صَٰدِقِينَ﴿٨٧

87ಆ ಪ್ರಾಣವನ್ನು ಮರಳಿ ಪಡೆಯಬಾರದೇಕೆ? ನೀವು ಸತ್ಯವನ್ನೇ ಹೇಳುತ್ತಿದ್ದರೆ.

فَأَمَّآ إِن كَانَ مِنَ ٱلۡمُقَرَّبِينَ﴿٨٨

88ಅವನು (ಮೃತನು) ಅಲ್ಲಾಹನ ಸಾಮೀಪ್ಯ ಪಡೆದವರಲ್ಲಿ ಸೇರಿದ್ದರೆ,

فَرَوۡحٞ وَرَيۡحَانٞ وَجَنَّتُ نَعِيمٖ﴿٨٩

89ಅವನಿಗೆ ನೆಮ್ಮದಿ, ವಿಶಿಷ್ಟ ಆಹಾರ ಮತ್ತು ಅನುಗ್ರಹಪೂರ್ಣ ಸ್ವರ್ಗವಿದೆ.

وَأَمَّآ إِن كَانَ مِنۡ أَصۡحَٰبِ ٱلۡيَمِينِ﴿٩٠

90ಅವನು ಬಲಭಾಗದ ಜನರಲ್ಲಿ ಸೇರಿದವನಾಗಿದ್ದರೆ,

فَسَلَٰمٞ لَّكَ مِنۡ أَصۡحَٰبِ ٱلۡيَمِينِ﴿٩١

91(ಅವನೊಡನೆ ಹೇಳಲಾಗುವುದು): “ನೀನು ಬಲಭಾಗದ ಜನರಲ್ಲಿ ಸೇರಿದ್ದರಿಂದ ನಿನಗೆ ಸುರಕ್ಷೆಯಿದೆ.”

وَأَمَّآ إِن كَانَ مِنَ ٱلۡمُكَذِّبِينَ ٱلضَّآلِّينَ﴿٩٢

92ಆದರೆ ಅವನು ಸತ್ಯನಿಷೇಧಿಗಳಲ್ಲಿ ಮತ್ತು ದುರ್ಮಾರ್ಗಿಗಳಲ್ಲಿ ಸೇರಿದವನಾಗಿದ್ದರೆ,

فَنُزُلٞ مِّنۡ حَمِيمٖ﴿٩٣

93ಅವನಿಗೆ ಕುದಿಯುವ ನೀರಿನ ಸತ್ಕಾರವಿದೆ.

وَتَصۡلِيَةُ جَحِيمٍ﴿٩٤

94ನರಕಾಗ್ನಿಗೆ ಪ್ರವೇಶವಿದೆ.

إِنَّ هَٰذَا لَهُوَ حَقُّ ٱلۡيَقِينِ﴿٩٥

95ನಿಶ್ಚಯವಾಗಿಯೂ ಇದು ಖಚಿತವಾದ ಸತ್ಯವಾಗಿದೆ.

فَسَبِّحۡ بِٱسۡمِ رَبِّكَ ٱلۡعَظِيمِ﴿٩٦

96ಆದ್ದರಿಂದ ಮಹತ್ವಪೂರ್ಣನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು (ಅವನ ಪರಿಶುದ್ಧತೆಯನ್ನು) ಕೊಂಡಾಡಿರಿ.

RELATED SURAHS